ಬೆಳ್ತಂಗಡಿ: ವಿದ್ಯುತ್ ಕಂಬ ಏರಿ ದುರಸ್ತಿ ಕಾರ್ಯ ನಡೆಸುತ್ತಿದ್ದ ವೇಳೆ ಹಠಾತ್ ವಿದ್ಯುತ್ ಪ್ರವಹಿಸಿ ವ್ಯಕ್ತಿಯೋರ್ವ ಕಂಬದಲ್ಲೇ ಮೃತಪಟ್ಟು, ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಎಂಬಲ್ಲಿ ಇಂದು ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಮೂಡಬಿದಿರೆಯ ಕುಮಾರ್ ಎಲೆಕ್ಟ್ರಿಕಲ್ಸ್ ನ ಸಿಬ್ಬಂದಿ ಪ್ರತಾಪ್ ಮೂಡಬಿದಿರೆ (20) ಎಂದು ಗುರುತಿಸಲಾಗಿದೆ. ಇದೇ ಗುತ್ತಿಗೆದಾರ ಕಂಪೆನಿಯ ನೌಕರರಾದ ನಾಗಪ್ಪ ಮೂಡಬಿದಿರೆ ಮತ್ತು ಕಿಶೋರ್ ಮೂಡಬಿದಿರೆ ವಿದ್ಯುತ್ ತಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಳೆಂಜದ ಶಾಲೆತ್ತಡ್ಕ ಜಂಕ್ಷನ್ ನಲ್ಲಿ ವಿದ್ಯುತ್ ಕಂಬ ಸ್ಥಳಾಂತರಿಸುವಾಗ ಈ ಅನಾಹುತ ಸಂಭವಿಸಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ಕಾಮಗಾರಿ ನಡೆಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.