ಮೂಡಿಗೆರೆಯಲ್ಲಿ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿ , ಸವಾರರು ಹೈರಾಣು

ಮೂಡಿಗೆರೆ: ಚಿಕ್ಕಮಗಳೂರಿನಿಂದ ಟಿಎಪಿಎಇಎಂಎಸ್‌ಗೆ ಅಕ್ಕಿ ಸಾಗಿಸುತ್ತಿದ್ದ ಲಾರಿ, ರೈತ ಭವನದ ತಿರುವಿನಲ್ಲಿ ಕೆಟ್ಟು ನಿಂತಿತ್ತು. ಪಟ್ಟಣದ ರೈತ ಭವನದ ಬಳಿ ಗುರುವಾರ ಮಧ್ಯಾಹ್ನ ಲಾರಿಯೊಂದು ರಸ್ತೆಯಲ್ಲಿ ಕೆಟ್ಟು ನಿಂತಿದ್ದರಿಂದ, ಎರಡು ಗಂಟೆಗೂ ಹೆಚ್ಚು ಕಾಲ ವಾಹನ ಸವಾರರು ಪರದಾಡಿದರು. ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ನೆರವಿನಲ್ಲಿ ರಸ್ತೆಯ ಒಂದು ಬದಿಯಲ್ಲಿ ವಾಹನಗಳು ಸಾಗಲು ಅವಕಾಶ ಮಾಡಿಕೊಟ್ಟರು. ಸಂಜೆಯವರೆಗೂ ವಾಹನ ದಟ್ಟಣೆ ಮುಂದುವರಿದಿತ್ತು.ಇದರಿಂದ ದ್ವಿಚಕ್ರ ವಾಹನಗಳನ್ನು ಹೊರತು ಪಡಿಸಿ ಬೇರೆ ವಾಹನಗಳು ಸಾಗಲು ದಾರಿಯಿಲ್ಲದೆ ಕಡೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಎರಡು ಕಿ.ಮೀ ದೂರದವರೆಗೆ ಸಾಲುಗಟ್ಟಿ ನಿಂತಿದ್ದವು.