ಉಡುಪಿ:ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಆದಾಗಿನಿಂದ ಸಮಸ್ಯೆಗೆ ಕಾರಣವಾಗಿದ್ದ ಸಂತೆಕಟ್ಟೆ ಜಂಕ್ಷನ್ ನ ಸಮಸ್ಯೆಗೆ ಮತ್ತು ಪಾದಾಚಾರಿಗಳ ಸುಗಮ ಸಂಚಾರಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಈ ಜಂಕ್ಷನ್ ನಲ್ಲಿ ಸುಮಾರು 27.4 ಕೋಟಿ ರೂಪಾಯಿ ವೆಚ್ಚದಲ್ಲಿ ಓವರ್ ಪಾಸ್ ನಿರ್ಮಾಣ ಮಾಡಲು ಕೇಂದ್ರ ಹೆದ್ದಾರಿ ಪ್ರಾಧಿಕಾರವು ಅನುಮೋದನೆ ನೀಡಿತ್ತು. ಈ ಕಾಮಗಾರಿಗೆ ಜನವರಿ 12ರಂದು ಉಡುಪಿ ಗುದ್ದಲಿ ಫೂಜೆಯನ್ನು ಕೂಡಾ ನಡೆಸಿದ್ದರು.
ಇದೀಗ ಈ ಓವರ್ ಪಾಸ್ ಕಾಮಗಾರಿಗೆ ಸಂಕಷ್ಟ ಎದುರಾಗಿದ್ದು ಸಂತೆಕಟ್ಟೆ ಜಂಕ್ಷನ್ ಮಧ್ಯದಲ್ಲಿ ಬೃಹತ್ ಗಾತ್ರದ ಬಂಡೆಕಲ್ಲು ಪತ್ತೆಯಾಗಿದ್ದು ಕಾಮಗಾರಿ ಅರ್ಧಕ್ಕೆ ನಿಂತಿದ್ದು,ಮುಂದಿನ ಕಾಮಗಾರಿ ನಿಧಾನವಾಗಿ ಸಾಗಲಿದ್ದು ಮಳೆಗಾಲದ ಮುನ್ನ ಕಾಮಗಾರಿ ಮುಗಿಯುವುದು ಅಸಾಧ್ಯದ ಮಾತು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿ ಸ್ಥಳೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.