ಹ್ಯಾಟ್ರಿಕ್ ಹೀರೋ ಅಪರೂಪದ ದಾಖಲೆ

ಸೂಪರ್ಸ್ಟಾರ್ ಕಮಲ್ ಹಾಸನ್ ಅವರು ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಚಿತ್ರದ ಮೂಲಕ ಬಿಗ್ ಕಮ್ ಬ್ಯಾಕ್ ಮಾಡಿದ್ರು. ಸೂಪರ್ ಸ್ಟಾರ್ ರಜನಿಕಾಂತ್ ಗೆ ಭರ್ಜರಿ ಹಿಟ್ ನೀಡಲು ನೆಲ್ಸನ್ ದಿಲೀಪ್ ಕುಮಾರ್ ಮತ್ತು ಜೈಲರ್ ಬರಬೇಕಾಯಿತು. ಸದ್ಯ ತಲೈವಾ ಅಬ್ಬರ ಜೋರಾಗಿದೆ.ಕಳೆದ ಕೆಲವು ದಿನಗಳಿಂದ ಸೌತ್ ಸಿನಿಮಾ ಇಂಡಸ್ಟ್ರಿ ಚೇತರಿಸಿಕೊಂಡಿದ್ದು, ಸೂಪರ್ ಸ್ಟಾರ್ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದಾರೆ. ಅದರಲ್ಲೂ ತಮಿಳಿನಲ್ಲಿ ಯುವ ಸ್ಟಾರ್ಗಳು ನೆಲಕಚ್ಚುತ್ತಿರುವಾಗ ಹಿಂದೆ ಉಳಿದಿದ್ದ ಹಿರಿಯ ಸೂಪರ್ ಸ್ಟಾರ್​ಗಳು ಸಖತ್ತಾಗಿ ಕಮ್​ಬ್ಯಾಕ್ ಮಾಡುತ್ತಿದ್ದಾರೆ.

ಹೀಗಿದ್ದರೂ ರಜನಿ, ಕಮಲ್, ಮೋಹನ್ ಲಾಲ್ ಮಾಡದ ದಾಖಲೆಯನ್ನು ಕನ್ನಡ ಚಕ್ರವರ್ತಿ ಎಂದೇ ಖ್ಯಾತರಾಗಿರುವ ಶಿವರಾಜ್ ಕುಮಾರ್ ಮಾಡಿದ್ದಾರೆ. ಡಾ. ರಾಜ್ಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗದ ಚಕ್ರವರ್ತಿಯಾಗಿ ಮಿಂಚುತ್ತಿದ್ದಾರೆ.

ಬಿಡುಗಡೆಯಾದ ಐದು ದಿನಗಳ ನಂತರ, ಜೈಲರ್ ಈಗಾಗಲೇ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 350 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ರಜನಿ ಸಿನಿಮಾ ನೋಡಲು ಅಭಿಮಾನಿಗಳು ಥಿಯೇಟರ್ಗಳಿಗೆ ಮುಗಿಬಿದ್ದಿದ್ದಾರೆ.ಚಿತ್ರದ ಯಶಸ್ಸಿಗೆ ಕೆಲವು ನಿರ್ಣಾಯಕ ಪಾತ್ರಗಳು ಕಾರಣವಾಗಿದೆ. ನೆಲ್ಸನ್ ಪ್ಲಾನ್ ಸಖತ್ ಆಗಿಯೇ ವರ್ಕೌಟ್ ಆಗಿದೆ. ಇತರ ಭಾಷೆಯ ಸೂಪರ್ ಸ್ಟಾರ್​ಗಳನ್ನು ಸೇರಿಸಿಕೊಂಡರು. ಮಲಯಾಳಂನಿಂದ ಮೋಹನ್ ಲಾಲ್ ಮತ್ತು ಕನ್ನಡದಿಂದ ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ಮಿಂಚಿದ್ರು.

ಕನ್ನಡದಲ್ಲಿ ಭಾರೀ ಹಿಟ್ ಆಗಿದ್ದ ಓಂ ಸಿನಿಮಾವನ್ನು ತೆಲುಗಿನಲ್ಲೂ ರಿಮೇಕ್ ಮಾಡಲಾಗಿದೆ. IMDB ವರದಿಯ ಪ್ರಕಾರ ಓಂ ಸಿನಿಮಾ 2015 ರವರೆಗೆ 550 ಕ್ಕೂ ಹೆಚ್ಚು ಬಾರಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪುರೋಹಿತರ ಮಗ ಗ್ಯಾಂಗ್ ಸ್ಟರ್ ಆಗಿದ್ದು, ಹಲವು ರಿಯಲ್ ಗ್ಯಾಂಗ್ ಸ್ಟರ್ ಗಳೂ ಸಿನಿಮಾದಲ್ಲಿ ನಟಿಸಿದ್ದಾರೆ. ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ನರಸಿಂಹನ ಪಾತ್ರ ಮಾಡಿದ್ದ ಶಿವಣ್ಣ ಥಿಯೇಟರ್ ಗಳಲ್ಲೇ ಅಲ್ಲೋಲ ಕಲ್ಲೋಲ ಮಾಡಿದ್ದರು. ಭಾರತದಲ್ಲೇ ಅತಿ ಹೆಚ್ಚು ಮರು ಬಿಡುಗಡೆಯಾದ ಚಿತ್ರದ ‘ನಾಯಕ’ ಎಂಬ ದಾಖಲೆಯನ್ನು ಶಿವಣ್ಣ ಮಾಡಿದ್ದಾರೆ. 1995ರಲ್ಲಿ ತೆರೆಕಂಡ ಓಂ ಚಿತ್ರದ ಮೂಲಕ ಶಿವರಾಜ್ ಕುಮಾರ್ ಈ ಸಾಧನೆ ಮಾಡಿದ್ರು. ನಟ ಮತ್ತು ನಿರ್ದೇಶಕ ಉಪೇಂದ್ರ ಓಂ ಸಿನಿಮಾ ನಿರ್ದೇಶಿಸಿದ್ದಾರೆ. ಪಾರ್ವತಮ್ಮ ರಾಜ್​ಕುಮಾರ್ ಓಂ ಸಿನಿಮಾ ನಿರ್ಮಿಸಿದ್ದರು.