ಲಾರಿ ಹಾರ್ನ್ ಗೆ ಬೈಕರ್ ಗಳಿಂದ ರಸ್ತೆಯಲ್ಲಿ ನಾಗಿನ್ ಡಾನ್ಸ್! ವೈರಲ್ ಆಯ್ತು ಹುಡುಗರ ನೃತ್ಯ!

ಟ್ವಿಟರ್ ಬಳಕೆದಾರ ಕಿರಣ್ ಅರುಣ್ ಕಡುಪಾಟೀಲ್ ಶೇರ್ ಮಾಡಿರುವ ವೈರಲ್ ವಿಡಿಯೋ ಒಂದರಲ್ಲಿ ಬೈಕರ್ ಗಳು ಲಾರಿಯ ಪುಂಗಿಯ ನಾದದ ಹಾರ್ನಿಗೆ ನಾಗಿನ್ ಡಾನ್ಸ್ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. 12 ಸಾವಿರಕ್ಕು ಹೆಚ್ಚು ವೀಕ್ಷಣೆ ಪಡೆದಿರುವ ಈ ವೀಡಿಯೋ ನೆಟ್ಟಿಗರ ಗಮನಸೆಳೆದಿದ್ದು, ಎಲ್ಲೆಲ್ಲೂ ಪಡ್ಡೆ ಹೈಕಳ ನಾಗಿನ್ ಡಾನ್ಸ್ ಸುದ್ದಿಯೇ ಮಿಂಚುತ್ತಿದೆ. ಈ ವೀಡಿಯೋ ನಿಖರವಾಗಿ ಯಾವ ಪ್ರದೇಶದ್ದೆಂದು ತಿಳಿದು ಬಂದಿಲ್ಲ.