ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC), ಕೆಟಿಸಿ (KTC) ಹಾಗೂ ಜಪಾನ್‌ನ ಚುಒಹ್ ಪಬ್ಲಿಷಿಂಗ್ ಕಂಪನಿಯ ಸಹಯೋಗದಲ್ಲಿ ಜಪಾನೀಸ್ ಭಾಷಾ ಕೋರ್ಸ್ (N5 – Beginner Level) ಆರಂಭಿಸಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೋರ್ಸ್ ಜುಲೈ 20, 2026 ರಿಂದ ಆರಂಭವಾಗಲಿದ್ದು, ಜಪಾನ್‌ನಲ್ಲಿ ಕೌಶಲ್ಯಾಧಾರಿತ ಉದ್ಯೋಗಗಳನ್ನು ಗುರಿಯಾಗಿಸಿಕೊಂಡವರಿಗೆ ಇದು ಉತ್ತಮ ಅವಕಾಶವಾಗಿದೆ.
ಈ ತರಬೇತಿಯಲ್ಲಿ ಜಪಾನೀಸ್ ಭಾಷೆಯನ್ನು ಓದುವುದು, ಬರೆಯುವುದು, ಬರವಣಿಗೆ ಪದ್ಧತಿಗಳನ್ನು ಕಲಿಯುವುದು, ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವುದು, ಕಂಜಿ (Kanji) ಅಕ್ಷರಗಳ ಪಾಂಡಿತ್ಯ, ಸಂಭಾಷಣಾ ಕೌಶಲ್ಯ ಹಾಗೂ ಭಾಷಾ ಸಾಮರ್ಥ್ಯ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳನ್ನು ಕಲಿಸಲಾಗುತ್ತದೆ.
ಕೋರ್ಸ್ ಪೂರ್ಣಗೊಳಿಸಿದವರಿಗೆ ಆಟೋಮೊಬೈಲ್ ರಿಪೇರಿ ಮತ್ತು ನಿರ್ವಹಣೆ, ಹಡಗು ನಿರ್ಮಾಣ ಮತ್ತು ಯಂತ್ರೋಪಕರಣ, ಕೈಗಾರಿಕಾ ಉತ್ಪಾದನೆ, ನಿರ್ಮಾಣ, ವಿಮಾನಯಾನ, ಆತಿಥ್ಯ ಸೇವೆ, ಕೃಷಿ, ಆಹಾರ ಮತ್ತು ಪಾನೀಯ ಉತ್ಪಾದನೆ ಹಾಗೂ ರೈಲ್ವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
ಹೆಚ್ಚಿನ ಮಾಹಿತಿಗಾಗಿ 81231 65069 ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ msdcskills.org ವೆಬ್‌ಸೈಟ್‌ಗೆ ಭೇಟಿ ನೀಡಬಹುದು.















