ಮಲ್ಪೆ: ಮೀನುಗಾರಿಕೆ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಬೋಟಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ.
ಜಾರ್ಖಂಡ್ ಮೂಲದ ಮನೋಜ್ ಸನ್(32) ಮೃತ ಪಟ್ತ ವ್ಯಕ್ತಿ. ಆ.31 ರ ರಾತ್ರಿ ಮೀನುಗಾರರೊಂದಿಗೆ ಮಲ್ಪೆ ಬಂದರಿನಿಂದ ಸುಮಾರು ಎರಡು ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸಲು ತೆರಳಿದ್ದರು. ದುರದೃಷ್ಟವಶಾತ್ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಮನೋಜ್ ಸನ್ ಅವರನ್ನು ಸಹಚರ ಕೀರ್ತನ್ ಎಂಬವರು ಮೇಲಕ್ಕೆತ್ತಿ ಉಪಚಾರ ನೀಡಿದ್ದಾರೆ. ಆದರೂ ಮನೋಜ್ ಸನ್ ಸ್ವಸ್ಥರಾಗದ್ದನ್ನು ಕಂಡು ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಮನೋಜ್ ಅವರನ್ನು ಪರೀಕ್ಷಿಸಿದ ವೈದ್ಯರು ಆತ ಅದಾಗಲೇ ಮೃತ ಪಟ್ಟಿರುವುದಾಗಿ ಘೋಷಿಸಿದ್ದಾರೆ.
ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












