ಕಾರ್ಕಳ: ಇಂದು ಬೆಳಿಗ್ಗೆ ಕಾರ್ಕಳ ಮಾರ್ಕೆಟ್ ಬಳಿಯ ಖಾಸಗಿ ಸೊಸೈಟಿಯೊಂದರಲ್ಲಿ ಉದ್ಯೋಗದಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಾರ್ಕಳ ಮಾರ್ಕೆಟ್ ರಸ್ತೆ ಬಳಿಯ ನಿವಾಸಿ ಪ್ರಮೀಳಾ ದೇವಾಡಿಗ (32) ಆತ್ಮಹತ್ಯೆ ಮಾಡಿಕೊಂಡವರು.
ಇಂದು ಮುಂಜಾನೆ ಕಚೇರಿಗೆ ತೆರಳಿ ಕಚೇರಿಯಿಂದ ಮತ್ತೆ ಮನೆಗೆ ಬಂದು ತನ್ನ ಸೀರೆಯನ್ನು ತೆಗೆದುಕೊಂಡು ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮೃತರು ಪತಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಕಾರ್ಕಳ ಪೊಲೀಸರು ಸ್ಥಳಕ್ಕಾಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.