ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ನ ಉಡುಪಿ, ಕುಂದಾಪುರ ಮತ್ತು ಮಂಗಳೂರು ಶಾಖೆಯ ವತಿಯಿಂದ, ಉಡುಪಿ ಟೆಂಪಲ್ ಸಿಟಿ ಲೀಜನ್ ನ ಸಹಯೋಗದೊಂದಿಗೆ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಡಾ.ತಲ್ಲೂರು ಶಿವರಾಮ್ ಶೆಟ್ಟಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ರವೀಂದ್ರನಾಥ್, ಡಾ.ಭಾಸ್ಕರ್ ಪಾಲಾರ್, ಡಾ. ಅಶೋಕ್ ಕುಮಾರ್, ಡಾ. ರಂಜಿತಾ ನಾಯಕ್, ಡಾ. ಮರಿಯೆಟ್ಟಾ ಡಿ’ಸೋಜಾ, ಡಾ. ದೀಪಾ ನಾಯಕ್, ಡಾ .ಶ್ರೀಪತಿ ಎಂ ಭಟ್ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಡುಪಿ ಟೆಂಪಲ್ ಸಿಟಿ ಲೀಜನ್ನಿನ ಅಧ್ಯಕ್ಷ ಜಗದೀಶ್ ಕೆಮ್ಮಣ್ಣು, ವಿಜಯಕುಮಾರ್ ಉದ್ಯಾವರ, ಸಂತೋಷ್ ಉದ್ಯಾವರ, ಸುಕುಮಾರ್ ಉಪಸ್ಥಿತರಿದ್ದರು.
ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ನ ರವೀಂದ್ರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವತಿಯಿಂದ ಕುಂದಾಪುರ ಮತ್ತು ಮಂಗಳೂರಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವೈದ್ಯರನ್ನು ಗೌರವಿಸಲಾಯಿತು.