ಉಡುಪಿ: ನಗರದ ರಿಲಯನ್ಸ್ ಮಳಿಗೆ ಸನಿಹ ಹಾದುಹೋಗುವ ಮುಖ್ಯ ರಸ್ತೆಯಲ್ಲಿ ಮೃತ್ಯುಕೂಪವೊಂದು ನಿರ್ಮಾಣವಾಗಿದ್ದು, ಪಾದಾಚಾರಿಗಳನು ನುಂಗಲು ಬಾಯ್ದೆರೆದು ಕೂತಿದೆ. ಅಪಾಯದ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ ಅಪಾಯವನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗಿದೆ. ಈ ರಸ್ತೆಯಲ್ಲಿ ಗುಂಡಿ ಬಿದ್ದು ಎರಡು ತಿಂಗಳು ಕಳೆದಿವೆ. ಆದರೂ ದುರಸ್ಥಿ ಪಡಿಸುವ ಕಾರ್ಯ ನಡೆದಿಲ್ಲ. ನಗರಸಭೆ ಕೂಡಲೆ ಎಚ್ಚೆತ್ತು ತಕ್ಷಣ ರಸ್ತೆಯ ಹೊಂಡ ಮುಚ್ಚಿಸುವಂತೆ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಸಿದ್ದಾರೆ.
ಗುಂಡಿಯಲ್ಲಿ ಮಳೆಯ ನೀರು ಹರಿಯುತ್ತಿರುವಾಗ ಯಾರಾದರೂ ಬಿದ್ದರೆ, ಬಿದ್ದ ವ್ಯಕ್ತಿ ಒಳಚರಂಡಿಯ ಮೂಲಕ ಕೊಚ್ಚಿ ಹೋಗಬಹುದು. ಸುರಂಗ ಮಾರ್ಗದಂತೆ ಇಲ್ಲಿ ಗುಂಡಿ ನಿರ್ಮಾಣವಾಗಿದೆ ಎಂದು ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.