ಮಂಗಳೂರಿನ ಸಾಂಪ್ರದಾಯಿಕ ಪಾಕವಿಧಾನಗಳ ಸಂಗ್ರಹ ‘ಕುಕಿಂಗ್ ವಿತ್ ಲವ್’ ಪುಸ್ತಕ ಬಿಡುಗಡೆ

ಮಂಗಳೂರು: ಮಂಗಳೂರಿನ ಸಾಂಪ್ರದಾಯಿಕ ಪಾಕವಿಧಾನಗಳ ಸಂಗ್ರಹ “ಕುಕಿಂಗ್ ವಿತ್ ಲವ್” ಪುಸ್ತಕ ಡಿ.೪ ರಂದು ಫರ್ಂಡೇಲ್ ಕಂಕನಾಡಿಯಲ್ಲಿ ಬಿಡುಗಡೆಗೊಂಡಿತು.

ಪುಸ್ತಕದ ಲೇಖಕಿ, ಶ್ರೀಮತಿ ನಯನಾ ಫೆರ್ನಾಂಡಿಸ್, ಶ್ರದ್ಧಾವಂತ ತಾಯಿ ಮತ್ತು ಹೆಂಡತಿಯಾಗಿ ಮಾನವ ಮತ್ತು ಪ್ರಾಣಿಗಳ ಯೋಗಕ್ಷೇಮವನ್ನು ವಿಚಾರಿಸುವವರಾಗಿ, ಹಲವಾರು ಲಾಭೋದ್ದೇಶವಿಲ್ಲದ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ.

“ಕುಕಿಂಗ್ ವಿತ್ ಲವ್” ಎಂಬುದು ಕೇವಲ ಅಡುಗೆ ಪುಸ್ತಕವಲ್ಲ, ಆದರೆ ನಯನಾ ಅವರ ತಂದೆ ತಯಾರಿಸಿದ ಮತ್ತು ಮರುನಿರ್ಮಿಸಿದ ಮಂಗಳೂರಿನ ಪಾಕವಿಧಾನಗಳ ಮೂಲಕ ಒಂದು ಪ್ರಯಾಣವಾಗಿದೆ. ನಯನಾ ಅವರು ಸಾಂಪ್ರದಾಯಿಕ ಪಾಕಪದ್ಧತಿಯನ್ನು ತುಂಬಾ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುಸ್ತಕದಲ್ಲಿರುವ ಪಾಕವಿಧಾನಗಳ ಅಮೂಲ್ಯ ಸಂಗ್ರಹಗಳ ರುಚಿಯನ್ನು ಅಸ್ವಾದಿಸಲು ಒಂದು ಉತ್ತಮ ಕೊಡುಗೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಪೊಲೀಸ್ ಆಯುಕ್ತ ಶಶಿಕುಮಾರ್, ಭಾರತೀಯ ಪ್ರವಾಸೋದ್ಯಮ ಪ್ರಾದೇಶಿಕ ನಿರ್ದೇಶಕ ವೆಂಟಕ್ಟೇಶನ್ ಧತ್ತಾರೇಯನ್ ಹಾಗೂ ಜಿಲ್ಲೆಯ ಪ್ರಮುಖ ಹೋಟೇಲ್ ಮ್ಯಾನೇಜ್ ಮೆಂಟ್ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.