ಉಡುಪಿ: ಸಾರ್ವಕರ್ ಅವರ ಚಿಂತನೆ, ವ್ಯಕ್ತಿತ್ವವನ್ನು ದಮನಿಸಲು ಒಂದು ವರ್ಗ ಇಂದಿಗೂ ಪ್ರಯತ್ನಿಸುತ್ತಿದೆ. ಆದರೆ, ಅವರ ಪ್ರಯತ್ನ ಎಂದಿಗೂ ಸಫಲವಾಗುವುದಿಲ್ಲ ಎಂದು ಸಾವರ್ಕರ್ ಅವರ ಮೊಮ್ಮಗನು ಆಗಿರುವ ಮೃತ್ಯುಂಜಯ ಪ್ರಕಾಶನದ ಮುಖ್ಯಸ್ಥ ಸಾತ್ಯಕಿ ಸಾವರ್ಕರ್ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದರ ಜನ್ಮವರ್ಷದ ಪ್ರಯುಕ್ತ ಕುರ್ಮಾ ಬಳಗ ವತಿಯಿಂದ ಉಡುಪಿಯ ಪುರಭವನದಲ್ಲಿ ಬುಧವಾರ ಆಯೋಜಿಸಿದ್ದ ಜಯೋಸ್ತುತೇ’ ಸಾರ್ವಕರ್ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ವಿಶ್ವಗುರು ಹಿಂದೂಸ್ಥಾನದ ಕನಸನ್ನು ನನಸು ಮಾಡಲು ಸಾರ್ವಕರ್ ತನ್ನ 12ನೇ ವಯಸ್ಸಿನಲ್ಲಿಯೇ ಶಪತ ಮಾಡಿದ್ದರು. ಅಲ್ಲದೆ, ಬ್ರಿಟಿಷರ ಕಪಿಮುಷ್ಠಿಯಿಂದ ಹಿಂದೂಸ್ತಾನವನ್ನು ಬಿಡಿಸಿಕೊಳ್ಳಲು ಸಶಸ್ತ್ರ ಕ್ರಾಂತಿ ನಡೆಸುವ ಉದ್ದೇಶದಿಂದ ಮಿತೃಮೇಳ ಸಂಸ್ಥೆ ಹುಟ್ಟು ಹಾಕಿದ್ದರು. ಮುಂದೆ ಅದೇ ಅಭಿನವ ಭಾರತವಾಯಿತು ಎಂದರು.
ಲೇಖಕ ಸಂದೀಪ್ ಬಾಲಕೃಷ್ಣನ್ ಉಪಸ್ಥಿತರಿದ್ದರು. ಕೂರ್ಮಾ ಬಳಗದ ಪ್ರಕಾಶ್ ಮಲ್ಪೆ ವಿಚಾರಗೋಷ್ಟಿ ನಡೆಸಿಕೊಟ್ಟರು. ಕೂರ್ಮಾ ಬಳಗದ ಶ್ರೀಕಾಂತ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಾವರ್ಕರ್ ಅವರ ಕೃತಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿತ್ತು.