ಪೋಷಕರು ಮೊಬೈಲ್ ನಲ್ಲಿ ಪಬ್ಜಿ ಗೇಮ್ ಆಡಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ 9ನೇ ತರಗತಿ‌ ವಿದ್ಯಾರ್ಥಿ  

ಹೈದರಾಬಾದ್: ಪೋಷಕರು ಮೊಬೈಲ್ ನಲ್ಲಿ ಪಬ್ಜಿ ಗೇಮ್ ಆಡಬೇಡ ಎಂದಿದ್ದಕ್ಕೆ 9ನೇ ತರಗತಿ‌ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ ನ ತಿರುಮಲನಗರದಲ್ಲಿ ನಡೆದಿದೆ.
ಆನ್ ಲೈನ್ ತರಗತಿ ಹಿನ್ನೆಲೆಯಲ್ಲಿ ಪೋಷಕರು 9ನೇ ತರಗತಿಯ ಮಗನಿಗೆ ಮೊಬೈಲ್ ಕೊಡಿಸಿದ್ದರು. ಆದರೆ ಆತ ದಿನವಿಡೀ ಮೊಬೈಲ್ ನಲ್ಲಿ ಪಬ್ಜಿ ಗೇಮ್ ಆಡುತ್ತಿದ್ದನು. ಇದನ್ನು ಪ್ರಶ್ನಿಸಿ ತಾಯಿ ಬುದ್ಧಿವಾದ ಹೇಳಿದಕ್ಕೆ ಬೇಸರಗೊಂಡ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.