ಕಾಪು: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉದ್ಯಾವರ ಪಾಪಾನಾಶಿನಿ ಹೊಳೆಯ ರೈಲ್ವೆ ಸೇತುವೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಉತ್ತರ ಭಾರತ ಮೂಲದ ಕಾರ್ಮಿಕ ಮಹಿಳೆ ಆಗಿರಬೇಕೆಂದು ಶಂಕಿಸಲಾಗಿದೆ. ಮೃತದೇಹ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಢಿಕ್ಕಿಯ ರಭಸಕ್ಕೆ ರೈಲ್ವೆ ಹಳಿ ಮತ್ತು ಹೊಳೆಗೆ ಹಾಕಿರುವ ಕಂಬದ ಬೀಮ್ ಒಳಗೆ ಹೋಗಿ ಬಿದ್ದಿದೆ ಎನ್ನಲಾಗಿದೆ.
ಕುತ್ತಿಗೆಯಲ್ಲಿ ತಾಳಿ ಸರ ಹೊಂದಿದ್ದ ಮೃತ ಮಹಿಳೆ, ನೈಟಿ ಧರಿಸಿದ್ದಾರೆ. ವಾರೀಸುದಾರರು ಕಾಪು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.