ಪಡುಬಿದ್ರಿ: ಬುದವಾರ ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದು ತೀರಾ ಅಸ್ವಸ್ಥಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಮುಕ್ಕದ ಖಾಸಗಿ ಆಸ್ಪತ್ರೆಗೆ ಒಯ್ಯುವಾಗಲೇ ಮೃತಪಟ್ಟಿರುವ ಘಟನೆ ಜೂ.13ರಂದು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತಪಟ್ಟವರು ಇನ್ನಾ ಕೆರೆ ಸಮೀಪ ಮನೆಯಲ್ಲಿ ಅಕ್ಕನೊಂದಿಗೆ ಇದ್ದ ಕೂಲಿ ಕಾಯಕ ರವಿ(46) ಎಂಬವರು. ಜ್ವರದಿಂದ ಬಳಲುತ್ತಿದ್ದ ರವಿ ಅವರು ವೈದ್ಯರ ಔಷಧಿ ತೆಗೆದುಕೊಂಡ ಬಳಿಕ ಜ್ವರ ಕಡಿಮೆಯಾಗಿ ಮನೆಯಲ್ಲಿಯೇ ಇದ್ದರು. ನಿತ್ರಾಣದಿಂದ ಅವರಿಗೆ ಶೌಚಾಲಯಕ್ಕೆ ಹೋದಾಗ ಹೃದಯಾಘಾತವಾಗಿರಬಹುದು ಅಥವಾ ಇನ್ನಾವುದೋ ಆನಾರೋಗ್ಯದಿಂದ ಮೃತಪಟ್ಟಿರಬೇಕೆಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ.