ಉಡುಪಿ: ಬೆಳ್ಳೆ ಗ್ರಾಮದ ಪಾಜಕ ಕ್ಷೇತ್ರದ ದ್ವಾರದ ಬಳಿ ಕಾರೊಂದು ಅಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ನಾಲ್ವರು ಗಾಯ ಗೊಂಡ ಘಟನೆ ಜೂ.12ರಂದು ಮಧ್ಯಾಹ್ನ ನಡೆದಿದೆ.
ಮೃತರನ್ನು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಬೆಳ್ಳೆ ಗ್ರಾಮದ ಆಗ್ನೇಸ್ ನೊರೊನ್ಹಾ(76) ಎಂದು ಗುರುತಿಸಲಾಗಿದೆ. ಅದೇ ರೀತಿ ಗಾಯಗೊಂಡ ರಿಕ್ಷಾ ಚಾಲಕ ಸುರೇಶ್, ಮೃತರ ಅಕ್ಕನ ಮಗಳು ಜೆಸಿಂತಾ ಮೆನೇಜಸ್(51), ಕಾರು ಚಾಲಕ ಮನೋಜ್ ಹಾಗೂ ಕಾರಿನಲ್ಲಿದ್ದ ದಾನಪ್ಪರಾಥೋಡ್ ಉಡುಪಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.