ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘ ಹಾಗೂ ಕೊಟ್ಟಾರಿ ಯುವ ವೇದಿಕೆಯ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಅಟಿಡ್ ಒಂಜಿ ದಿನ ಕಾರ್ಯಕ್ರಮವನ್ನು ಪಡೀಲ್ ನಲ್ಲಿರುವ ಕೊಟ್ಟಾರಿ ಸಭಾಭವನದಲ್ಲಿ ಆಯೋಜಿಸಲಾಯಿತು.
ಕೊಟ್ಟಾರಿ ಸಮಾಜದಲ್ಲಿ ಎಸ್ ಎಸ್ ಎಲ್ ಸಿ ಯಿಂದ, ಉನ್ನತ ವ್ಯಾಸಂಗ ಮಾಡುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಮ್ಮಾನ ಕಾರ್ಯಕ್ರಮ ನಡೆಯಿತು.
ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಟ್ಟಾರಿ ಸಮಾಜದ ಯುವ ಕಲಾವಿದರ ಕೂಡುವಿಕೆಯಿಂದ ದಶಾರಥಿ ದರ್ಶನ ಯಕ್ಷಗಾನ ವೈಭವ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನವ ಮಂಗಳೂರು ಬಂದರು ಬಳಕೆದಾರ ವೆಲ್ ಪೇರ್ ನ ಉಪಧ್ಯಾಕ್ಷ ಪ್ರತಾಪ ಶೆಟ್ಟಿ, ನೇತ್ರ ತಜ್ಞ ಡಾ. ಸುದೀರ್ ಹೆಗ್ಡೆ, ಕಾಪು ಪಾಂಗಳ ಕೊಟ್ಟಾರಿ ಮನೆಯ ಯಜಮಾನ ಉದಯ ಶೆಟ್ಟಿ, ಕೊಟ್ಟಾರಿ ಸಂಘದ ಗೌರವ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಕೊಟ್ಟಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ತೇವು ತಾರನಾಥ್ ಕೊಟ್ಟಾರಿ, ಮಹಾಬಲ ಕೊಟ್ಟಾರಿ, ಉದ್ಯಮಿ ಜೀತೆಂದ್ರ ಕೊಟ್ಟಾರಿ, ಯುವ ವೇದಿಕೆ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ರಾಕೇಶ್ ಕೊಟ್ಟಾರಿ ಮತ್ತಿತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೊಟ್ಟಾರಿ ಸಮಾಜದ ಸಾವಿರಾರು ಭಾಂಧವರು ಭಾಗವಹಿಸಿದ್ದರು.