ನಿಟ್ಟೆ: ರೋಟರಿ ಕ್ಲಬ್ ನಿಟ್ಟೆ ಹಾಗೂ ಎನ್.ಎಮ್.ಎ.ಎಮ್. ತಾಂತ್ರಿಕ ಮಹಾವಿದ್ಯಾಲಯ ನಿಟ್ಟೆ ಇದರ ಸಹಭಾಗಿತ್ವದಲ್ಲಿ ವಿವಿಧ ಬಗೆಯ ಸಸಿ ತಳಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಣೆ ಆ. 1 ರಂದು ನಿಟ್ಟೆ ವಿದ್ಯಾಲಯದ ಆವರಣದಲ್ಲಿ ನಡೆಯಿತು.
ಅರಣ್ಯಾಧಿಕಾರಿ ಪ್ರಕಾಶ್ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವನಮಹೋತ್ಸವ ಆಚರಣೆಯ ಮಹತ್ವ ಹಾಗೂ ಸಸಿಗಳ ಪಾಲನೆಯ ಕುರಿತು ವಿವರಿಸಿದರು. ವಿದ್ಯಾಸಂಸ್ಥೆಯ ರಿಜಿಸ್ಟ್ರಾರ್ ಎ. ಯೋಗೀಶ್ ಹೆಗ್ಡೆ ಉಪಸ್ಥಿತರಿದ್ದರು. ನಿಟ್ಟೆ ರೋಟರಿ ಕ್ಲಬ್ ಅಧ್ಯಕ್ಷೆ ಡಾ. ವೀಣಾದೇವಿ ಶಾಸ್ತ್ರೀಮಠ್ ಸ್ವಾಗತಿಸಿದರು. ಕಾರ್ಯದರ್ಶಿ ಆಲೆನ್ ರೋಷನ್ ಡಿಮೆಲ್ಲೋ ವಂದಿಸಿದರು.