ಬ್ರಹ್ಮಾವರ: ಬ್ರಹ್ಮಾವರದ ನೀಲಾವರ ಗ್ರಾಮದಲ್ಲಿ ಜೆಸಿಬಿ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಬ್ರಹ್ಮಾವರದ ಮಟಪಾಡಿಯ ಅಭಿಷೇಕ್ (28) ಮೃತಪಟ್ಟವರು.
ಇವರು ನಿನ್ನೆ ಬೆಳಿಗ್ಗೆ ನೀಲಾವರ ಗ್ರಾಮದ ಬಲ್ಜಿ ರೋಡ್ನಲ್ಲಿರುವ ಮಟಪಾಡಿಯಿಂದ ಕುಂಜಾಲು ಕಡೆಗೆ ಹೋಗುತ್ತಿದ್ದರು. ಈ ವೇಳೆ ಜೆ.ಸಿ.ಬಿ ವಾಹನವನ್ನು ಅದರ ಚಾಲಕನು ಪಕ್ಕದ ಮಣ್ಣಿನ ರೋಡ್ ನಿಂದ ನಿರ್ಲಕ್ಷತನದಿಂದ ಮುಖ್ಯ ರಸ್ತೆಗೆ ಚಲಾಯಿಸಿ ಅಭಿಷೇಕ್ ರವರ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಅಭಿಷೇಕ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಲ್ಲಿ ಪರೀಕ್ಷಿಸಿದ ವೈಧ್ಯರು ಅಭಿಷೇಕ್ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.