ಪ್ರೈಮ್‌ ಉಡುಪಿ: ಬ್ಯಾಂಕಿಂಗ್‌ ಪರೀಕ್ಷಾ ತರಬೇತಿ ಆರಂಭ

ಉಡುಪಿ: ಉಡುಪಿಯ ಪ್ರೈಮ್‌ ಸಂಸ್ಥೆಯಿಂದ ನಡೆಯಲಿರುವ ಐಬಿಪಿಎಸ್‌, ಎಸ್‌ಬಿಐ, ಕರ್ಣಾಟಕ ಬ್ಯಾಂಕ್‌ ಕ್ಲರಿಕಲ್/ಆಫೀಸರ್ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಆ. 3ರಿಂದ ನೂತನ ವೀಕೆಂಡ್‌ ಬ್ಯಾಚ್ ತರಬೇತಿ ತರಗತಿಗಳು ಆರಂಭಗೊಳ್ಳಲಿದೆ.
ಕರಾವಳಿ ಬೈಪಾಸ್‌ ಬಳಿಯ ಪ್ರೈಮ್‌ ಕೇಂದ್ರದಲ್ಲಿ ಪ್ರಾರಂಭಗೊಳ್ಳಲಿದ್ದು, ಪೂರ್ವಭಾವಿಯಾಗಿ ಕಳೆದ ಶನಿವಾರ ಬ್ಯಾಂಕಿಂಗ್‌ ಪರೀಕ್ಷಾ ತರಬೇತಿ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ ನಡೆಸಲಾಯಿತು.
ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿ ಮಂಗಳೂರಿನ ಶೈಲೇಶ್‌ ಅವರು, ಬ್ಯಾಂಕಿಂಗ್‌ ನೇಮಕಾತಿ ಪರೀಕ್ಷೆಯ ಹೊಸ ಪಠ್ಯಕ್ರಮಗಳಿಗೆ ಅನುಗುಣವಾಗಿ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಬರುವ ರೀಸನಿಂಗ್‌, ಇಂಗ್ಲಿಷ್‌, ನ್ಯೂಮರಿಕಲ್ ಎಬಿಲಿಟಿ ವಿಷಯಗಳ 100 ಅಂಕಗಳ ಪ್ರಶ್ನೆಯನ್ನು 1 ಗಂಟೆ ಅವಧಿಯಲ್ಲಿ ಉತ್ತರಿಸಲು ಬೇಕಾದ ಶಾರ್ಟ್‌ಕಟ್ ಮೆಥೆಡ್‌, ಮೈನ್ಸ್‌ ಪರೀಕ್ಷೆಯಲ್ಲಿ ಬರುವ 5 ವಿಷಯಗಳ 200 ಪ್ರಶ್ನೆಗಳನ್ನು ಅತೀ ಕಡಿಮೆ ಅವಧಿಯಲ್ಲಿ ತ್ವರಿತ, ನಿಖರವಾಗಿ 2 ಗಂಟೆಯಲ್ಲಿ ಉತ್ತರಿಸಲು ಬೇಕಾದ ಟೈಮ್‌ ಮ್ಯಾನೇಜ್‌ಮೆಂಟ್ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಆ. 3ರಿಂದ ಪ್ರತೀ ಶನಿವಾರ ಮಧ್ಯಾಹ್ನ 2ರಿಂದ 5ರ ವರೆಗೆ, ಪ್ರತೀ ರವಿವಾರ ಬೆಳಗ್ಗೆ 9ರಿಂದ 4ರ ವರೆಗೆ 5 ತಿಂಗಳ ಕಾಲ ಜರಗಲಿರುವ 200 ಗಂಟೆಗಳ ಈ ತರಬೇತಿ 2019ರ ಡಿಸೆಂಬರ್‌ನಲ್ಲಿ ಅಂತ್ಯಗೊಳ್ಳಲಿದೆ. ಗ್ರಂಥಾಲಯ ವ್ಯವಸ್ಥೆಯನ್ನು ಅಭ್ಯರ್ಥಿಗಳಿಗೆ ಒದಗಿಸಲಾಗುವುದು.
ಪದವೀಧರರು, ಸ್ನಾತಕೋತ್ತರ ಪದವೀಧರರು, ಅಂತಿಮ ಪದವಿ ಪೂರೈಸುತ್ತಿರುವ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಿ ಮುಂಬರುವ ಬ್ಯಾಂಕಿಂಗ್‌ ಪರೀಕ್ಷೆ, ಆಪ್ಟಿಟ್ಯೂಡ್‌ ಮಾದರಿ ಪರೀಕ್ಷೆಗಳಾದ ರೈಲ್ವೆ, ಇನ್ಸೂರೆನ್ಸ್, ಪೋಸ್ಟಲ್, ಮೆಸ್ಕಾಂ ಹಾಗೂ ಇನ್ನಿತರ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದು. ನೂತನ ವೀಕೆಂಡ್‌ ಬ್ಯಾಚ್ಗೆ ಸೇರಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕರಾವಳಿ ಬೈಪಾಸ್‌ ಬಳಿಯ ರೀಗಲ್ ನೆಕ್ಸ್ಟ್ ಕಟ್ಟಡದಲ್ಲಿರುವ ಪ್ರೈಮ್‌ ಕೇಂದ್ರ ಅಥವಾ ಬ್ರಹ್ಮಗಿರಿ ಲಯನ್ಸ್ ಭವನ ಹತ್ತಿರದ ಗ್ರೇಸ್‌ ಮೇನರ್‌ ಬಿಲ್ಡಿಂಗ್‌ನಲ್ಲಿರುವ ಪ್ರೈಮ್‌ ಕಚೇರಿ ಸಂಪರ್ಕಿಸಬಹುದು ಎಂದು ನಿರ್ದೇಶಕರ ಪ್ರಕಟನೆ ತಿಳಿಸಿದೆ.