ಉಡುಪಿ: ನಿಟ್ಟೂರು ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ನೇಮೋತ್ಸವ ಮತ್ತು ಮಹಾಅನ್ನಸಂತರ್ಪಣೆ ಇದೇ ಮೇ 4 ಮತ್ತು 5 ರಂದು ನಡೆಯಲಿದೆ. ದಿನಾಂಕ 4 ರ ಶನಿವಾರ ಬೆಳಿಗ್ಗೆ 7.30ಕ್ಕೆ ಗಜ ಕಂಬ ಮೂಹೂರ್ತ,10.30ಗೆ ಮಹಾಚಪ್ಪರದ ಆರೋಹಣ,12 ಗಂಟೆಗೆ ಮಹಾಪೂಜೆ,12.30 ಯಿಂದ 3 ರ ವರೆಗೆ ಮಹಾಅನ್ನಸಂತರ್ಪಣೆ ನಡೆಯಲಿದೆ.
ಅಂದು ಸಂಜೆ 4.30ಕ್ಕೆ ದೈವಗಳ ದರ್ಶನ, 5.30 ಗಂಟೆಗೆ ದೈವಸ್ಥಾನದಿಂದ ಮುಖಮೂರ್ತಿ ಭಂಡಾರಗಳನ್ನು ಭವ್ಯ ಮೆರವಣಿಗೆಯಲ್ಲಿ ಮಹಾಚಪ್ಪರಕ್ಕೆ ತಂದು 7.30 ಕ್ಕೆ ಚಪ್ಪರದಲ್ಲಿ ಮಹಾ ಪೂಜೆ ನಡೆಯಲಿದೆ. ಅಂದು ರಾತ್ರಿ 10 ರಿಂದ ಶ್ರೀ ಬಬ್ಬುಸ್ವಾಮಿ ದೈವದ ನೇಮ, ರಾತ್ರಿ 1.30 ಗಂಟೆಯಿಂದ ಶ್ರೀ ತನ್ನಿಮಾನಿಗ ದೇವಿಯ ನೇಮ ನಡೆಯಲಿದೆ.
ಮೇ 5 ರ ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಧೂಮಾವತಿ ಬಂಟ ದೈವಗಳ ನೇಮ,1ಗಂಟೆಗೆ ಮಹಾಗುಳಿಗಧ್ವಯ ದೈವಗಳ ನೇಮ, ಸಂಜೆ 4 ಗಂಟೆಗೆ ಕೊರಗಜ್ಜ ದೈವದ ನೇಮ ನಡೆಯಲಿದೆ. ಈ ಎಲ್ಲಾ ಮಹಾದೇವತಾ ಕಾರ್ಯಕ್ರಮಕ್ಕೆ ಊರ ಪರವೂರ ಭಕ್ತಾದಿಗಳು ಆಗಮಿಸಿ ಶ್ರೀ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ನಿಟ್ಟೂರು ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಪ್ರ. ಕಾರ್ಯದರ್ಶಿ ಶ್ರೀ ಸುರೇಂದ್ರ ಮೆಂಡನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.