ಈ ಬಾರಿಯ ದ್ವಿತೀಯ ಪಿ.ಯು.ಸಿ.ಕಲಾ ವಿಭಾಗದಲ್ಲಿ ಉಡುಪಿ ಜಿಲ್ಲೆ ಗುರುತಿಸ ಬೇಕಾದ ಇನ್ನೊಂದು ಅದ್ವಿತೀಯ ಪ್ರತಿಭೆ ಸೃಷ್ಟಿಯಾಗಿದ್ದು ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂವ೯ ಕಾಲೇಜಿನ ಕಲಾ ವಿದ್ಯಾರ್ಥಿನಿ ಕು.ಸೃಷ್ಟಿ ವಿ. ಇಲ್ಲಿಕೂಡಾ ಈ ಪ್ರತಿಭೆಗೆ ಹೆಚ್ಚಿನ ಮನ್ನಣೆ ಪ್ರಚಾರ ಮಾಧ್ಯಮಗಳಲ್ಲಿ ಸಿಗಲೇ ಇಲ್ಲ. ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂದರುವ ಸೃಷ್ಟಿ ಈ ಬಾರಿಯ ದ್ವಿತೀಯ ಪಿ.ಯು.ಕಲಾ ವಿಭಾಗದ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದಿದ್ದಾಳೆ ಅನ್ನುವುದನ್ನು ನಾವು ಗುರುತಿಸಲೇ ಬೇಕು.
ಸೃಷ್ಟಿ ಗಳಿಸಿರುವ ಅಂಕಗಳ ಬಗ್ಗೆ ಒಮ್ಮೆ ದೃಷ್ಟಿ ಹರಿಸೇೂಣ. ಕನ್ನಡ 99;ಇಂಗ್ಲಿಷ್ 90;ಇತಿಹಾಸ 98;ಅಥ೯ಶಾಸ್ತ್ರ95;ಸಮಾಜ ಶಾಸ್ತ್ರ 100;ರಾಜ್ಯ ಶಾಸ್ತ್ರ 98 ಅಂದರೆ ಒಟ್ಟು 600 ಅಂಕಗಳಲ್ಲಿ580. ಕಲಾ ವಿಷಯಗಳಲ್ಲಿ ಇಷ್ಟೊಂದು ಅಂಕಗಳಿಕೆ ನಿಜಕ್ಕೂ ಅತ್ಯುತ್ತಮ ಸಾಧನೆ ಎಂದೇ ಹೇಳ ಬೇಕಾಗಿದೆ.
ಈಕೆ ತನ್ನ ಪದವಿ ಶಿಕ್ಷಣಕ್ಕಾಗಿ ಉಡುಪಿ ಪ್ರತಿಷ್ಠಿತ ಡಾ.ಜಿ.ಶಂಕರ್ ಪದವಿ ಮತ್ತು ಸ್ನಾತಕೋತ್ತರ ಕಾಲೇಜಿಗೆ ಪ್ರವೇಶಾತಿ ಪಡೆದಿದ್ದಾಳೆ. ಕಳೆದ ಒಂದು ವರುಷದಿಂದ ಉಡುಪಿಯ ಪ್ರೈಮ್ ತರಬೇತಿ ಸಂಸ್ಥೆಯಲ್ಲಿ ಐ.ಎ.ಎಸ್ /ಕೆ.ಎ.ಎಸ್. .ಸ್ಪಧಾ೯ತ್ಮಕ ಪರೀಕ್ಷೆ ತರಬೇತಿ ಪಡೆಯುತ್ತಿದ್ದಾಳೆ.ಕನ್ನಡ ಭಾಷಾ ಮಾಧ್ಯಮದಲ್ಲಿ ಸಾಕಷ್ಟು ಪರಿಣಿತಿ ಪಡೆದಿರುವ ಈಕೆ ಇನ್ನೂ ಹೆಚ್ಚಿನ ಅಧ್ಯಯನ ಮತ್ತು ಶ್ರಮವಹಿಸಿದರೆ ಯು.ಪಿ.ಎಸ್.ಸಿ.ಪರೀಕ್ಷೆಯಲ್ಲಿ ವಿಶೇಷ ಸಾಧನಗೈಯಲು ಅದ್ವಿತೀಯ ಪ್ರತಿಭೆ ಸೃಷ್ಟಿಯಿಂದ ಸಾಧ್ಯ ಅನ್ನುವುದು ನಮ್ಮೆಲ್ಲರ ವಿಶ್ವಾಸವೂ ಹೌದು. ಈ ಕಲಾ ಪ್ರತಿಭೆಗೆ ಇನ್ನಷ್ಟು ಪ್ರೇೂತ್ಸಾಹ ಸಿಗಲಿ ಅನ್ನುವುದು ನಮ್ಮೆಲ್ಲರ ಹಾರೈಕೆ.
ಬರಹ: ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಉಡುಪಿ.