ಮುಂಬೈ: ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿಯವರು ಸಂಸ್ಥಾನದ ಶಾಖಾ ಮಠ ಶ್ರೀರಾಮ ಮಂದಿರ ಮುಂಬೈ ವಡಾಲದ ಮೊಕ್ಕಾಂ ಸಂದರ್ಭದಲ್ಲಿ ಸಂಸ್ಥಾನದ ಪಟ್ಟದೇವರು ಮತ್ತು ವಡಾಲ ಶ್ರೀ ರಾಮ ಮಂದಿರದ ಶ್ರೀರಾಮಚಂದ್ರ ದೇವರಿಗೆ ರಾಮನವಮಿಯ ಪ್ರಯುಕ್ತ ವಿಶೇಷವಾದ ಪೂಜೆಯನ್ನು ಸಲ್ಲಿಸಿದರು.
ಈ ವಿಶೇಷ ದಿನದಂದು ಮುಂಬರುವ ಶ್ರೀ ಮಠದ 550 ವರ್ಷದ ಆಚರಣೆಯ ಪ್ರಯುಕ್ತವಾಗಿ ಮತ್ತು ಶ್ರೀ ದೇವರ ಪ್ರೀತ್ಯರ್ಥಕ್ಕಾಗಿ ವಿಶೇಷವಾಗಿ 550 ಕೋಟಿ ಶ್ರೀ ರಾಮ ನಾಮ ತಾರಕ ತೃಯೋದಶಾಕ್ಷರಿ ಮಂತ್ರದ ಜಪ ಅಭಿಯಾನ ಕೆ ಚಾಲನೆ ನೀಡಿ, ಸಮಾಜ ಬಾಂಧವರಿಗೆ ಈ ಮಹಾಮಂತ್ರದ ಉಪದೇಶವನ್ನು ನೀಡಿ ಆಶೀರ್ವದಿಸಿ ಅನುಗ್ರಹಸಿದರು.
ಈ ಅಭಿಯಾನವು 17 ಏಪ್ರಿಲ್ 2024 ರಿಂದ ಪ್ರಾರಂಭವಾಗಿ 18 ಅಕ್ಟೋಬರ್ 2025 ರವರೆಗೆ ಸರಾಗವಾಗಿ 550 ದಿನಗಳ ಕಾಲ ನಡೆಯುತ್ತಿದೆ. ಈ ಅಭಿಯಾನದಲ್ಲಿ ಜಿ ಎಸ್ ಬಿ ಸಮಾಜ ಬಾಂಧವರು ಹತ್ತಿರದ ಜಪ ಕೇಂದ್ರಕ್ಕೆ ತೆರಳಿ ವೈದಿಕರ ಮಾರ್ಗದರ್ಶನದೊಂದಿಗೆ ಜಪ ನಡೆಸುವುದು ಮತ್ತು ಶ್ರೀರಾಮ ದೇವರ ಕೃಪೆಗೆ ಪಾತ್ರರಾಗುವುದಕ್ಕಾಗಿ ಈಗಾಗಲೇ ದೇವಸ್ಥಾನ ಹಾಗೂ ಶಾಖೆಯ ಮಠಗಳು ಸೇರಿ ಒಟ್ಟಿಗೆ 108 ಜಪ ಕೇಂದ್ರಗಳು ನೊಂದಾಯಿಸಲ್ಪಟಿದೆ ಮತ್ತು ಸದ್ಯದಲ್ಲಿಯೇ ಇನ್ನಿತರ ದೇವಾಲಯಗಳಲ್ಲಿ ಜಪ ಕೇಂದ್ರಗಳನ್ನು ಆರಂಭಿಸಿ ಈ ಅಭಿಯಾನಕ್ಕೆ ಕೈಜೋಡಿಸಬೇಕೆಂದು ಸಮಾಜ ಬಾಂಧವರಿಗೆ ಕರೆ ನೀಡಿದರು.