ಉಡುಪಿ: ಎಲ್ಲೂರು ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಏ.20 ರವರೆಗೆ ವಾರ್ಷಿಕ ನಡಾವಳಿ ಕಾರ್ಯಕ್ರಮಗಳು ಜರುಗುತ್ತಿದ್ದು, ಏ. 18 ರಂದು ಶ್ರೀ ಮನ್ಮಾಹಾರಥೋತ್ಸವ ಹಾಗೂ ಮಹಾ ಅನ್ನಸಂತರ್ಪಣೆಯು ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು:
ಪರ್ಯಾಯ ತಂತ್ರಿ ವೇ.ಮೂ.ಬೆಟ್ಟಿಗೆ ವೆಂಕಟರಾಜ ತಂತ್ರಿಗಳು, ಸರದಿ ಅರ್ಚಕರಾದ ವೇ.ಮೂ ಶ್ರೀನಿವಾಸ ಭಟ್ಟ, ವೇ.ಮೂ. ವೆಂಕಟೇಶ ಭಟ್ಟ ಹಾಗೂ ವೆ.ಮೂ ಗುರುರಾಜ ಭಟ್ಟರ ನೇತೃತ್ವದಲ್ಲಿ ಏ. 18 ರಂದು ಬೆಳಿಗ್ಗೆ 11 ಕ್ಕೆ ರಥಾರೋಹಣ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸ್ಯಾಕ್ಸೋಫೋನ್ ಕಛೇರಿ, ರಾತ್ರಿ 8.30ಕ್ಕೆ ರಥೋತ್ಸವ, ಉತ್ಸವ ಬಲಿ, ರಂಗಪೂಜೆ, ಭೂತ ಬಲಿ, ಶಯನೋತ್ಸವ.
ಏ.19 ರಂದು ಕವಾಟೋದ್ಘಾಟನೆ, ತುಲಾಭಾರ ಸೇವೆ, ಉತ್ಸವ ಬಲಿ, ಸಂಜೆ ಅವಭೃತ, ಗಂಧಪೂಜೆ, ಧ್ವಜ ಅವರೋಹಣ, ಮಹಾಮಂತ್ರಾಕ್ಷತೆ.
ಏ.13 ರಿಂದ 19 ರವರೆಗೆ ಪ್ರತಿದಿನ ಪ್ರಧಾನ ಹೋಮ, ನವಕ, ಶತರುದ್ರಾಭಿಷೇಕ, ಉತ್ಸವ ಬಲಿ, ಕಟ್ಟೆಪೂಜೆಗಳು ನಡೆಯಲಿರುವುದು.