ನಿಟ್ಟೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಫೆಮಿಲಿಯರೈಸೇಶನ್

ನಿಟ್ಟೆ: ಕರ್ನಾಟಕದ ಪ್ರತಿಷ್ಠಿತ ತಾಂತ್ರಿಕ ಮಹಾವಿದ್ಯಾಲಯಗಳಲ್ಲೊಂದಾದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜು.29 ರಂದು ಮೊದಲನೇ ವರ್ಷದ ಬಿ.ಇ ಕೋರ್ಸ್ ಸೇರಿರುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಹೆತ್ತವರಿಗೆ “ನಿಟ್ಟೆ ಫೆಮಿಲಿಯರೈಸೇಶನ್” ಕಾರ್ಯಕ್ರಮ ನಡೆಯಿತು.

ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎನ್.ವಿನಯ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಂಪೆನಿಯ ಅಗತ್ಯತೆಗೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲ್ಯತೆಯನ್ನು ಬೆಳೆಸಿಕೊಳ್ಳಬೇಕು. ಐಚ್ಛಿಕ ವಿಷಯಗಳಲ್ಲಿ ಸಮರ್ಥ ಬೆಳವಣಿಗೆ ತೋರುವುದು ಅಗತ್ಯ. ನಿಟ್ಟೆ ತಾಂತ್ರಿಕ ವಿದ್ಯಾಲಯವು ನಿಮ್ಮನ್ನು ಈ ದೃಷ್ಠಿಯಲ್ಲಿ ತಯಾರುಮಾಡಲು ಇಚ್ಘಿಸುತ್ತದೆ. ವಿದ್ಯೆ ಹಾಗೂ ಉದ್ಯೋಗದೊಂದಿಗೆ ಸಮಾಜದ ಏಳಿಗೆಗೂ ನೀವು ಶ್ರಮಿಸಬೇಕು ಎಂದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇತಿಹಾಸ ಹಾಗೂ ಮಹತ್ವವನ್ನು ತಿಳಿಸಿದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಹಾಗೂ ಡೀನ್ ಎಕಾಡೆಮಿಕ್ಸ್ ಡಾ.ಐ ರಮೇಶ್ ಮಿತ್ತಂತಾಯ ಪಠ್ಯಕ್ರಮ ಹಾಗೂ ತರಗತಿಗಳ ಬಗೆಗೆ ವಿವರಿಸಿದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ರೆಜಿಸ್ಟ್ರಾರ್ ಹಾಗೂ ಚೀಫ್ ವಾರ್ಡನ್ ಪ್ರೊ.ಯೋಗೀಶ್ ಹೆಗ್ಡೆ ಮಾತನಾಡಿ, ಕಾಲೇಜಿನ ಹಾಗೂ ಹಾಸ್ಟೆಲ್‌ನ ನಿಯಮ ಹಾಗೂ ಇಲ್ಲಿ ನಡೆದುಕೊಳ್ಳಬೇಕಾದ ರೀತಿಯ ಬಗೆಗೆ ತಿಳಿಸಿದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಹಾಗು ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಡಾ.ಶ್ರೀನಿವಾಸ್ ರಾವ್ ಬಿ.ಆರ್ , ಪರೀಕ್ಷಾ ಕ್ರಮಗಳ ಬಗೆಗೆ, ಪ್ರಥಮ ವರ್ಷದ ವಿದ್ಯಾರ್ಥಿ ಕೊರ್ಡಿನೇಟರ್ ಪ್ರೊ.ವಿನಯ್ ಬಿ.ಆರ್ ಕಾಲೇಜಿನ ನಿಯಮಗಳು ಹಾಗು ವಿದ್ಯಾರ್ಥಿಗಳ ಮನವಿಗಳ ಬಗ್ಗೆ, ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಮತ್ತು ಟ್ರೈನಿಂಗ್ ವಿಭಾಗದ ಮುಖ್ಯಸ್ಥೆ ಪ್ರೊ.ಶಾಲಿನಿ ಕೆ ಶರ್ಮ ಪ್ಲೇಸ್ಮೆಂಟ್ ಬಗ್ಗೆ ತಿಳಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಸುಬ್ರಹ್ಮಣ್ಯ ಭಟ್ ವಂದಿಸಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಗ್ರೈನಲ್ ಡಿಮೆಲ್ಲೊ ಕಾರ್ಯಕ್ರಮ ನಿರೂಪಿಸಿದರು.