ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಇಂಡಿಯಾದ ರಾಜ್ಯ ಉಪ ಕಾರ್ಯದರ್ಶಿಯಾಗಿ ಪೊಲೀಸ್ ವಾರ್ತೆ ಪ್ರಧಾನ ಸಂಪಾದಕ ಸುಭಾಶ್ ಶೆಟ್ಟಿ ಅವಿರೋಧ ಆಯ್ಕೆ

ಉಡುಪಿ: ರಾಷ್ಟ್ರೀಯ ಮಟ್ಟದಲ್ಲಿ ಪತ್ರಕರ್ತರ ಶ್ರೇಯೋಭಿವೃದ್ಧಿ ಹಾಗೂ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಲು ಅಸ್ತಿತ್ವದಲ್ಲಿರುವ ‘ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಇಂಡಿಯಾ (NAI) ರಾಜ್ಯ ಉಪ ಕಾರ್ಯದರ್ಶಿಯಾಗಿ ಪೊಲೀಸ್ ವಾರ್ತೆ ಪ್ರಧಾನ ಸಂಪಾದಕ ಸುಭಾಶ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

NAI ರಾಜ್ಯ ಘಟಕದ ಅಧ್ಯಕ್ಷ ಅಮ್ಮರವಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಶ್ರೀಕಾಂತ್ ಕಶ್ಯಪ್ ಇವರು ನಿರ್ಭೀತಿಯ ಪತ್ರಿಕೆಯಾದ “ಪೊಲೀಸ್ ವಾರ್ತೆ” ಇದರ ಪ್ರಧಾನ ಸಂಪಾದಕ ಸೃಜನಶೀಲ ಮತ್ತು ಸರಳ ವ್ಯಕ್ತಿತ್ವದ ಸುಭಾಶ್.ಆರ್.ಶೆಟ್ಟಿ ಇವರನ್ನು ನೇಮಕಾತಿ ಮಾಡಿರುತ್ತಾರೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಪಿನ್ ಗೌರ್ ಆದೇಶದ ಮೇರೆಗೆ ಇವರನ್ನು ನೇಮಕ ಮಾಡಲಾಗಿದೆ.

ಸಂಘಟನೆಯ ಕಾರ್ಯ, ತತ್ವ ಸಿದ್ಧಾಂತಗಳನ್ನು ಯಶಸ್ವಿಯಾಗಿ ನಿಭಾಯಿಸಲು ಬದ್ಧನಾಗಿದ್ದೇನೆ ನೂತನವಾಗಿ ನೇಮಕವಾಗಿರುವ ಸುಭಾಶ್ ಶೆಟ್ಟಿ ತಿಳಿಸಿದ್ದಾರೆ.

ಪೊಲೀಸ್ ವಾರ್ತೆ ಪತ್ರಿಕೆ ರಾಜ್ಯ ವ್ಯಾಪ್ತಿಯಲ್ಲಿ ನೊಂದವರ ಶೋಷಿತರ ಧ್ವನಿಯಾಗಿದ್ದು, ಭ್ರಷ್ಟ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸಿಂಹ ಸ್ವಪ್ನವಾಗಿದೆ.