ವಾಷಿಂಗ್ಟನ್: ಕಂಟೈನರ್ ಹಡಗೊಂದು ಡಿಕ್ಕಿ ಹೊಡೆದದ್ದರಿಂದ ಅಮೆರಿಕದ ಬಾಲ್ಟಿಮೋರ್ ನಗರದ ಪ್ರಮುಖ ಸೇತುವೆ ಮಂಗಳವಾರ ಕುಸಿದು ಬಿದ್ದಿದೆ. ಈ ವೇಳೆ ಸೇತುವೆಯಲ್ಲಿದ್ದ ವಾಹನಗಳು ಕೂಡಾ ನೀರಿಗೆ ಬಿದ್ದಿವೆ. ನಾಟಕೀಯ ಸಿಸಿಟಿವಿ ದೃಶ್ಯಾವಳಿಯು ಕಂಟೇನರ್ ಹಡಗು ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಬುಡಕ್ಕೆ ಬಡಿದು, ಸೇತುವೆಯು ಪಾಲಾಪ್ಸ್ಕೋ ನದಿಯ ಪಾಲಾಗುತ್ತಿರುವುದನ್ನು ತೋರಿಸುತ್ತಿದೆ. ಸೇತುವೆ ನದಿಗೆ ಕುಸಿದಿದ್ದು, ಸುಮಾರು 20 ಮಂದಿ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ.
ಬಾಲ್ಟಿಮೋರ್ ಅಗ್ನಿಶಾಮಕ ಇಲಾಖೆಯ ಕೆವಿನ್ ಕಾರ್ಟ್ರೈಟ್ ಪ್ರಕಾರ ಇಡೀ ಸೇತುವೆ ಕುಸಿದಿದೆ ಮತ್ತು ಈ ವೇಳೆ ಸೇತುವೆ ಮೇಲೆ ಹಲವು ವಾಹನಗಳು ಮತ್ತು ಟ್ರಾಕ್ಟರ್-ಟ್ರೇಲರ್ ಇದ್ದು ಅವೆಲ್ಲಾ ನೀರು ಪಾಲಾಗಿರುವಂತೆ ಭಾಸವಾಗುತ್ತಿದೆ ಎಂದು ಬಾಲ್ಟಿಮೋರ್ ಸನ್ ವರದಿ ಮಾಡಿದೆ.
1.6-ಮೈಲಿ (2.6-ಕಿಲೋಮೀಟರ್), ನಾಲ್ಕು-ಲೇನ್ ಸೇತುವೆಯು ಮುನ್ಸಿಪಲ್ ಬಾಲ್ಟಿಮೋರ್ನ ನೈಋತ್ಯಕ್ಕೆ ಪಟಾಪ್ಸ್ಕೋ ನದಿಯನ್ನು ವ್ಯಾಪಿಸಿದೆ. ಇದು 1977 ರಲ್ಲಿ ಆರಂಭವಾಗಿದ್ದು, ವರ್ಷಕ್ಕೆ 11 ಮಿಲಿಯನ್ ವಾಹನಗಳನ್ನು ಸಾಗಿಸುತ್ತದೆ. ಬಾಲ್ಟಿಮೋರ್ ಇದು ವಾಷಿಂಗ್ಟನ್ ಡಿಸಿ ಯ ಪಕ್ಕದಲ್ಲಿರುವ ಅಮೇರಿಕಾ ಪೂರ್ವ ಕರಾವಳಿಯ ಕೈಗಾರಿಕಾ ನಗರವಾಗಿದ್ದು ಸುತ್ತಮುತ್ತಲಿನ ರಸ್ತೆ ಜಾಲದ ಪ್ರಮುಖ ಭಾಗವಾಗಿದೆ.
ಶಿಪ್ ಮಾನಿಟರಿಂಗ್ ವೆಬ್ಸೈಟ್ MarineTraffic ಮಂಗಳವಾರ ಮುಂಜಾನೆ ಸೇತುವೆಯ ಕೆಳಗೆ ನಿಲ್ಲಿಸಿದ ಡಾಲಿ ಎಂಬ ಸಿಂಗಾಪುರದ ಧ್ವಜದ ಕಂಟೈನರ್ ಹಡಗನ್ನು ತೋರಿಸಿದೆ.
ಬಾಲ್ಟಿಮೋರ್ ನ ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯದಲ್ಲಿ ತೊಡಗಿದೆ.