ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಬ್ಬರು ಶಂಕಿತರನ್ನು ಬಂಧಿಸಿದೆ ಎಂದು ಮೂಲಗಳು ಮಂಗಳವಾರ ಖಚಿತಪಡಿಸಿವೆ.
ಈ ಇಬ್ಬರು ಶಂಕಿತರು ಶಂಕಿತ ಬಾಂಬರ್ನೊಂದಿಗೆ ನೇರ ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಎನ್ಐಎ ಅಧಿಕಾರಿಗಳು ಶಂಕಿತರನ್ನು ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕರೆದೊಯ್ದಿದ್ದಾರೆ. ಆದರೆ, ಈ ಬಗ್ಗೆ ಎನ್ಐಎ ಇನ್ನಷ್ಟೇ ಹೇಳಿಕೆ ನೀಡಬೇಕಿದೆ.
ತನಿಖಾ ಸಂಸ್ಥೆಗಳು, ಎನ್ಐಎ ಮತ್ತು ರಾಜ್ಯ ವಿಶೇಷ ವಿಭಾಗದ ಸಿಸಿಬಿ ತಂಡಗಳು ವಿವಿಧ ರಾಜ್ಯಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರೂ ಸಹ, ಬಾಂಬರ್ ನ ಸುಳಿವು ಸಿಕ್ಕಿಲ್ಲ.












