ಮಂಗಳೂರು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಣ್ಣರಲೋಕ ಮೋಕೆದ ಕಲಾವಿದರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ಅಶ್ರಯದಲ್ಲಿ ಯಕ್ಷಗಾನ, ಶಾಸ್ತ್ರೀಯ ಸಂಗೀತ, ಚಿತ್ರಕಲೆ ತರಬೇತಿಯ 43ನೇ ಶಾಖೆಯನ್ನು ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಲೈನ್ ಬಳಿಯ ಮುನಿಶ್ವೇರ ಮಹಾಗಣಪತಿ ದೇವಸ್ಥಾನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಪ್ರಸನ್ನ ಭಟ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷರಾದ ಸುದರ್ಶನ್ ಜೈನ್ ಪಂಜಿಕಲ್ಲು ವಹಿಸಿದರು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ಕಾಂತಾಡಿಗುತ್ತು ಸೀತರಾಮ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಮಧುಸೂದನ್ ಶೆಣೈ, ಯಕ್ಷಗಾನ ಶಿಕ್ಷಕ ಅರುಣ್ ಕುಮಾರ್ ಧರ್ಮಸ್ಥಳ, ಚಿಣ್ಣರ ಲೋಕದ ಸಹ ಸಂಚಾಲಕರಾದ ವಿಶಾಲಾಕ್ಷಿ, ಚಿಣ್ಣರ ಲೋಕದ ಸ್ಥಾಪಕರು, ಹಾಗೂ ಪ್ರಧಾನ ಸಂಚಾಲಕರಾದ ಮೋಹನ್ ದಾಸ್ ಕೊಟ್ಟಾರಿ ಮುನ್ನೂರು ಉಪಸ್ಥಿತರಿದ್ದರು.


















