ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಗ್ನಿ ಮತ್ತು ಸುರಕ್ಷತೆ ಕುರಿತು ಜಾಗೃತಿ ಕಾರ್ಯಾಗಾರ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೌನ್ಸೆಲಿಂಗ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕರ್ನಾಟಕ ರಾಜ್ಯದ ಅಗ್ನಿ ಸುರಕ್ಷತೆ ಸಂಸ್ಥೆ ಜಂಟಿಯಾಗಿ “ಅಗ್ನಿ ಮತ್ತು ಸುರಕ್ಷತೆ” ಕುರಿತು ಜಾಗೃತಿ ಕಾರ್ಯಾಗಾರವನ್ನು ಮಾ.18 ರಂದು ಕಾಲೇಜಿನ ಆವರಣದಲ್ಲಿ ಆಯೋಜಿಸಿತ್ತು.

ಕಾರ್ಯಾಗಾರದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ್ ಕಲ್ಗುಟಿಕರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ದಹಿಸುವ ವಸ್ತುಗಳ ಸರಿಯಾದ ಶೇಖರಣೆ, ವಿದ್ಯುತ್ ವ್ಯವಸ್ಥೆಗಳ ಸಮರ್ಪಕ
ನಿರ್ವಹಣೆ ಮತ್ತು ತೆರೆದ ಜ್ವಾಲೆಯ ಸುರಕ್ಷಿತ ಬಳಕೆಯಿಂದ ಅಗ್ನಿದುರಂತವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಉಡುಪಿ ಅಗ್ನಿಶಾಮಕ ಕಛೇರಿಯ ಸಿಬ್ಬಂದಿಗಳು ಅಗ್ನಿ ದುರಂತ ಸಂಭವಿಸಿದಾಗ ವಹಿಸಬೇಕಾದ ಮುಂಜಾಗ್ರತೆ, ಸುರಕ್ಷತಾ ಸಲಕರಣೆಗಳ ಸರಿಯಾದ ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಉತ್ತಮ ಆರೋಗ್ಯವನ್ನು ಪಡೆಯಲು ಒಳ್ಳೆಯ ಜೀವನ
ಶೈಲಿಯನ್ನು ಅನುಸರಿಸಬೇಕು ಎಂದರು.

ಅಗ್ನಿ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿತ್ತು.

ಕಾರ್ಯಾಗಾರದಲ್ಲಿ ಸಂಸ್ಥೆಯ ಪ್ರಾಂಶುಪಾಲಡಾ. ತಿರುಮಲೇಶ್ವರ ಭಟ್, ಉಪ ಪ್ರಾಂಶುಪಾಲ ಡಾ. ಗಣೇಶ್ ಐತಾಳ್ ಕಾರ್ಯಾಗಾರವನ್ನು ಆಯೋಜಿಸಿದಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆ, ಕೌನ್ಸೆಲಿಂಗ್ ಘಟಕದ
ಸಂಯೋಜಕರನ್ನು ಮತ್ತು ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಯೋಜಕ ಡಾ. ರವೀಂದ್ರ ಎಚ್ ಜೆ ಅವರನ್ನು ಅಭಿನಂದಿಸಿದರು.