ಮಂಗಳೂರು: ಬ್ಯಾಂಕ್ ಆಫ್ ಬರೋಡಾ, ವಲಯ ಕಛೇರಿ, ಮಂಗಳೂರು ಮತ್ತು ಬೆಸಂಟ್ ಮಹಿಳಾ ಕಾಲೇಜು ಕೊಡಿಯಾಲ್ ಬೈಲ್, ಮಂಗಳೂರು ವತಿಯಿಂದ ಜಂಟಿಯಾಗಿ ಅಂತರ ಕಾಲೇಜು ಹಿಂದಿ ಸಂಗೋಷ್ಠಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಮಂಗಳೂರಿನ ಸ್ಥಳೀಯ ಕಾಲೇಜು, ಉಡುಪಿ ಮತ್ತು ಸುಳ್ಯ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಂಗೋಷ್ಠಿ ಮತ್ತು ಪೇಪರ್ ಪ್ರಸ್ತುತಿ ಸ್ಪರ್ಧೆಯಲ್ಲಿ ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾತೃಭಾಷೆಯ ಮಹತ್ವದ ಬಗ್ಗೆ ವಿಮರ್ಶಿಸಿ ಸಂಶೋಧನಾ ಲೇಖನಗಳನ್ನು ಪ್ರಸ್ತುತ ಪಡಿಸಿದರು.
ಬೆಸೆಂಟ್ ಮಹಿಳಾ ಕಾಲೇಜ್ ಪ್ರಾಂಶುಪಾಲ ಡಾ. ಪ್ರವೀಣ ಕುಮಾರ್ ಕೆ ಸಿ ಅಧ್ಯಕ್ಷತೆ ವಹಿಸಿದ್ದರು. ಸಂಗೋಷ್ಠಿಯ ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡಾ, ವಲಯ ಕಛೇರಿಯ ಉಪಮಹಾಪ್ರಬಂಧಕ ಅಶ್ವಿನಿ ಕುಮಾರ್ಬೆಸೆಂಟ್ ಮಹಿಳಾ ಕಾಲೇಜ್ ನ ಆಡಳಿತಾಧಿಕಾರಿ ಪ್ರೊ. ರಾಜಶೇಖರ ಹೆಬ್ಬಾರ್, ಉಪಾಧ್ಯಕ್ಷೆ ಡಾ. ಮಂಜುಳ ಕೆ ಟಿ ಉಪಸ್ಥಿತರಿದ್ದರು.
ಹಿಂದಿ ವಿಭಾಗಾಧ್ಯಕ್ಷ ಡಾ. ಪರಶುರಾಮ್ ಮಾಲಗೆ ಮತ್ತು ಬ್ಯಾಂಕ್ ಆಫ್ ಬರೋಡಾದ ರಾಜಭಾಷಾ ಅಧಿಕಾರಿ ಪುಷ್ಪಲತಾ ಕಾರ್ಯಕ್ರಮವನ್ನು ಸಂಯೋಜಿಸಿದರು.