ಉಡುಪಿ: ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ, 60ನೇ ವಯಸ್ಸಿನಲ್ಲಿ ಯಕ್ಷಗಾನ ಕಲಿತ ಯಕ್ಷ ಸಂಘಟಕ, ಸಮಾಜ ಸೇವಕಡಾ। ತಲ್ಲೂರು ಶಿವರಾಮ ಶೆಟ್ಟಿ ಇವರನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಕರ್ನಾಟಕ ಸರಕಾರ ನೇಮಕಗೊಳಿಸಿದೆ.
ಸದಸ್ಯರಾಗಿ ಎಚ್. ರಾಘವ, ಕೃಷ್ಣಪ್ಪ ಪೂಜಾರಿ, ಗುರುರಾಜ್ ಭಟ್, ವಿನಯ್ ಕುಮಾರ್ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ (ಮೂಲ್ಕಿ), ಮೋಹನ್ ಕೊಪ್ಪಾಳ್, ಸತೀಶ್ ಅಡ್ಡಪ್ಪ ಸಂಕಬೈಲ್, ರಾಜೇಶ್ ಕಳೆ, ದಯಾನಂದ ಪಿ, ಜಿ.ವಿ.ಎಸ್. ಉಳ್ಳಾಲ ಆಯ್ಕೆಯಾಗಿದ್ದಾರೆ.