ಆರ್‌ಸಿಬಿ ಆಟಗಾರ್ತಿ ಎಲ್ಲಿಸ್ ಪೆರ್ರಿ ಭರ್ಜರಿ ಸಿಕ್ಸರ್ಗೆ ‘ಪಂಚ್’ ಕಾರಿನ ಗಾಜು ಪುಡಿಪುಡಿ!!

ಬೆಂಗಳೂರು: ಸೋಮವಾರದಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ್ತಿ ಎಲ್ಲಿಸ್ ಪೆರ್ರಿ ಬಾರಿಸಿದ ಆಕರ್ಷಕ ಸಿಕ್ಸರ್ ಗೆ ಮೈದಾನದಲ್ಲಿ ನಿಲ್ಲಿಸಲಾಗಿದ್ದ ಪಂಚ್ ಇವಿ ಕಾರಿನ ಗ್ಲಾಸ್ ಗೆ ಚೆಂಡು ಹೊಡೆದು ಗ್ಲಾಸ್ ಪುಡಿಪುಡಿಯಾಗಿದೆ!

18.5 ಓವರ್ ನಲ್ಲಿ ಬ್ಯಾಟಿಂಗ್ ಮಾಡಿದ ಎಲ್ಲಿಸ್ ಪೆರ್ರಿ ಭರ್ಜರಿ ಸಿಕ್ಸ್ ಬಾರಿಸುವ ಮೂಲಕ ಚೆಂಡು ನೇರವಾಗಿ ಮೈದಾನದಲ್ಲಿ ನಿಲ್ಲಿಸಿದ್ದ ಕಾರಿನ ಕಿಟಕಿಗೆ ಬಡಿದು ಇದರಿಂದ ಕಾರಿನ ಗಾಜು ಒಡೆದಿದೆ. ಕೇವಲ 37 ಎಸೆತಗಳನ್ನು ಎದುರಿಸಿದ ಪೆರ್ರಿ ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳೊಂದಿಗೆ 58 ರನ್ ಗಳಿಸಿದ್ದಾರೆ. ಕ್ರೀಡಾಂಗಣದಲ್ಲಿ ನೆರೆದಿದ್ದ ಆರ್​ಸಿಬಿ ಅಭಿಮಾನಿಗಳೆಲ್ಲ ಕುಣಿದು ಕುಪ್ಪಳಿಸಿದ್ದಾರೆ.