ಚೆನ್ನೈನಲ್ಲಿ ಎನ್‌ಐಎ ತಂಡ ದಾಳಿ: ಬೆಂಗಳೂರು ಸ್ಪೋಟ ಪ್ರಕರಣದ ಐವರು ಶಂಕಿತರು ವಶಕ್ಕೆ

ಚೆನ್ನೈ: ಎನ್‌ಐಎ ತಂಡ ಚೆನ್ನೈನಲ್ಲಿ ದಾಳಿ ನಡೆಸಿದ್ದು, ರಾಮೇಶ್ವರಂನ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಚೆನ್ನೈ ನಗರದ ಐವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.

ಸೋಮವಾರ ರಾತ್ರಿ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಚೆನ್ನೈ ನಗರದ ದೇವಸ್ಥಾನವೊಂದರ ಬಳಿ ಐವರನ್ನು ಎನ್‌ಐಎ ವಶಕೆ ಪಡೆದಿದೆ.

ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಅವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದಲ್ಲದೆ, ಬೆಂಗಳೂರು ಜೈಲಿನಲ್ಲಿ ಮೂಲಭೂತವಾದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 7 ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.

ತಮಿಳುನಾಡು, ಕೇರಳ ಮತ್ತು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳ ಒಟ್ಟು 17 ಸ್ಥಳಗಳಲ್ಲಿ ತನಿಖಾ ಸಂಸ್ಥೆ ಶೋಧ ನಡೆಸುತ್ತಿದೆ ಎಂದು ವರದಿಯಾಗಿದೆ.