ಇಂದು ಎಂ.ಸಿ.ಸಿ. ಬ್ಯಾಂಕಿನ ಹೊಸ ಬ್ರಹ್ಮಾವರ ಶಾಖೆಯ ಉದ್ಘಾಟನೆ.

ಬ್ರಹ್ಮಾವರ: ಬ್ರಹ್ಮಾವರ, ವಾರಂಬಳ್ಳಿಯ ಆಕಾಶವಾಣಿ ವೃತ್ತದ ಬಳಿ, ನೆಲಮಹಡಿ ಶೇಷಗೋಪಿ ಪ್ಯಾರಡೈಸ್ ನಲ್ಲಿ ಎಂ.ಸಿ.ಸಿ. ಬ್ಯಾಂಕಿನ ೧೭ನೇ ಹೊಸ ಶಾಖೆಯಾದ ಬ್ರಹ್ಮಾವರ ಶಾಖೆಯ ಉದ್ಘಾಟನೆಯು ಮಾ.೩ ರಂದು ಬೆಳಿಗ್ಗೆ ೧೧.೧೫ಕ್ಕೆ ಜರಗಲಿರುವುದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ ಶ್ರೀ ಅನಿಲ್ ಲೋಬೊ, ಅಧ್ಯಕ್ಷರು, ಎಂ.ಸಿ.ಸಿ. ಬ್ಯಾಂಕ್ ಲಿ., ಮಂಗಳೂರು ನಡೆಸಲಿದ್ದು, ಶಾಖೆ ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಸದಸ್ಯರಾದ ಶ್ರೀ ಯಶಪಾಲ್ ಸುವರ್ಣ ಅವರು ನಡೆಸಲಿದ್ದಾರೆ.

ರೆ| ಫಾ| ಜಾನ್ ಫೆರ್ನಾಂಡಿಸ್, ಧರ್ಮಗುರುಗಳು, ಹೋಲಿ ಫ್ಯಾಮಿಲಿ ಚರ್ಚ್, ಬ್ರಹ್ಮಾವರ ಆಶೀರ್ವಚನ ಮಾಡಲಿದ್ದಾರೆ.

ರೆ| ಫಾ| ಎಂ.ಸಿ. ಮಥಾಯಿ, ವಿಕಾರ್ ಜನರಲ್, ಎಸ್.ಎಮ್.ಒ.ಎಸ್. ಕ್ಯಾಥೆಡ್ರಲ್ ಬ್ರಹ್ಮಾವರ, ಅಧ್ಯಕ್ಷರು, ಒ.ಎಸ್.ಸಿ. ಶಿಕ್ಷಣ ಸಂಸ್ಥೆ ಇವರು ಭದ್ರತಾ ಕೊಠಡಿಯ ಉದ್ಘಾಟನೆಯನ್ನು ನಡೆಸಲಿರುವರು.

ಹಾಗೂ ಗೌರವ ಅತಿಥಿಗಳಾದ ರೆ| ಫಾ| ಡೆನಿಸ್ ಡೆಸಾ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಉಡುಪಿ ಧರ್ಮಪ್ರಾಂತ್ಯ.
ರೆ ಫಾ| ವಿನ್ಸೆಂಟ್ ಕ್ರಾಸ್ತಾ, ಕಾರ್ಯದರ್ಶಿ, ಕಥೊಲಿಕ್ ಶಿಕ್ಷಣ ಸಂಸ್ಥೆ ಉಡುಪಿ (ಸೆಸು).
ಶ್ರೀ ಪಿ.ಎ. ಹೆಗ್ಡೆ, ಹೆಚ್ಚುವರಿ ಸುಪರಿಟೆಂಡೆಂಟ್ ಆಫ್ ಪೋಲೀಸ್, ಉಡುಪಿ ಜಿಲ್ಲೆ
ಶ್ರೀ ಹೆಚ್.ಎನ್. ರಮೇಶ್, ಸಹಕಾರ ಸಂಘಗಳ ಉಪ ನಿಬಂಧಕರು (ಪ್ರಭಾರ), ಉಡುಪಿ ಜಿಲ್ಲೆ
ಶ್ರೀ ನಿತ್ಯಾನಂದ ಬಿ.ಆರ್., ಅಧ್ಯಕ್ಷರು, ಗ್ರಾಮ ಪಂಚಾಯತ್, ವಾರಂಬಳ್ಳಿ
ಜನಾಬ್, ಕೆ.ಪಿ, ಇಬ್ರಾಹಿಂ, ನಿಕಟಪೂರ್ವ ಅಧ್ಯಕ್ಷರು, ವಕ್ಫ್ ಬೋರ್ಡ್, ಉಡುಪಿ ಜಿಲ್ಲೆ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.