ರಷ್ಯಾದ “ಡ್ಯಾಡಿ” ಬಾಟ್ಸ್ ಅನ್ನು ಸೋಲಿಸಿದ ಭಾರತದ “ಗಾಡ್‌ಸ್ಪೀಡ್”: ರೋಬೋಟ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಡಿಎಸ್ ರೋಬೋಟಿಕ್ಸ್

ಮಾಸ್ಕೋ: ಕೌಶಲ್ಯ ಮತ್ತು ಕಾರ್ಯತಂತ್ರದ ಅದ್ಭುತ ಪ್ರದರ್ಶನದಲ್ಲಿ, ಭಾರತದ ಡಿಎಸ್ ರೋಬೋಟಿಕ್ಸ್ ರೋಬೋಟ್ ಯುದ್ಧದಲ್ಲಿ ರಷ್ಯಾದ ಅತ್ಯುತ್ತಮ ತಂಡ ಡ್ಯಾಡಿ ಬಾಟ್ಸ್ ಅನ್ನು ಸೋಲಿಸಿ ವಿಜಯಶಾಲಿಯಾಗಿ ಹೊರಹೊಮ್ಮಿದೆ.

ರಷ್ಯಾದಲ್ಲಿ ನಡೆದ ‘ಗೇಮ್ಸ್ ಆಫ್ ದಿ ಫ್ಯೂಚರ್’ ಪಂದ್ಯಾವಳಿಯಲ್ಲಿ ಮಾಸ್ಕೋದ ಟರ್ಬೊಮೆಕಾಟ್ರೊನಿಕಿ ನಂತರದ ಸ್ಥಾನವನ್ನು ಗಳಿಸಿದ ರಷ್ಯಾದ ಡ್ಯಾಡಿ ಬಾಟ್ಸ್ ತಂಡವನ್ನು ಹಿಂದಿಕ್ಕಿ ಭಾರತದ ಡಿಎಸ್ ರೋಬೋಟಿಕ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಫಿನಾಲೆಯಲ್ಲಿ, ಭಾರತದ ಡಿಎಸ್ ರೋಬೋಟಿಕ್ಸ್, ತಮ್ಮ “ಗಾಡ್‌ಸ್ಪೀಡ್” ಎಂಬ ರೋಬೋಟ್‌ನೊಂದಿಗೆ, ರಷ್ಯಾದ “ಡ್ಯಾಡಿ” ಎಂಬ ರೋಬೋಟ್‌ನೊಂದಿಗೆ ಸ್ಪರ್ಧಿಸಿದ್ದರು. ಭಾರತೀಯ ತಂಡವು $175k ಮೊತ್ತದ ಬಹುಮಾನ ಗೆದ್ದಿದೆ.

ಪ್ರತಿ ಪಂದ್ಯವು ಮೂರು ನಿಮಿಷಗಳದ್ದಾಗಿದ್ದು, ಈ ಸಮಯದಲ್ಲಿ ತೀರ್ಪುಗಾರರು ಹಾನಿ, ಆಕ್ರಮಣಶೀಲತೆ ಮತ್ತು ನಿಯಂತ್ರಣವನ್ನು ಮೌಲ್ಯಮಾಪನ ಮಾಡಿ ಗರಿಷ್ಠ 11 ಅಂಕಗಳನ್ನು ನೀಡುತ್ತಾರೆ.

ಗೇಮ್ಸ್ ಆಫ್ ದ ಫ್ಯೂಚರ್, ಅತ್ಯಾಧುನಿಕ ಅಂತರರಾಷ್ಟ್ರೀಯ ಸ್ಪರ್ಧೆಗಳನ್ನು ಪ್ರತಿನಿಧಿಸುತ್ತವೆ, ಇದು ಭೌತಿಕ ಮತ್ತು ಡಿಜಿಟಲ್ ಅಂಶಗಳನ್ನು ಸಂಯೋಜಿಸುವ ಹೈಬ್ರಿಡ್ ವಿಭಾಗಗಳನ್ನು ಒಳಗೊಂಡಿರುತ್ತದೆ. ಸಾಂಪ್ರದಾಯಿಕ ಕ್ರೀಡೆಗಳನ್ನು ಇ-ಸ್ಪೋರ್ಟ್ಸ್ ಮತ್ತು VR/AR ತಂತ್ರಜ್ಞಾನದೊಂದಿಗೆ ಸಂಯೋಜಿಸುತ್ತದೆ.

ಫೆಬ್ರವರಿ 21 ರಿಂದ ಮಾರ್ಚ್ 3 ರವರೆಗೆ ಕಜಾನ್‌ನಲ್ಲಿ ನಡೆಯಲಿರುವ ಉದ್ಘಾಟನಾ ಗೇಮ್ಸ್ ಆಫ್ ದಿ ಫ್ಯೂಚರ್‌ನಲ್ಲಿ 21 ವಿಭಾಗಗಳನ್ನು ಒಳಗೊಂಡಿರುವ ಕ್ರೀಡಾ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ದೇಶಗಳ 2,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ.