ಮುಂಡ್ಕೂರು: ಕಜೆ ಕುಕ್ಕುದಡಿ ಶ್ರೀ ಮಹಾಮ್ಮಾಯಿ ದೇವಸ್ಥಾನ ಹಳ್ಳಿಯ ಜನರ ಆರಾಧನೆಯ ಮೂಲ ಕೇಂದ್ರವಾಗಿದ್ದು ತನ್ನ ಕಾರಣಿಕ ಹಾಗೂ ಪವಾಡಗಳ ಮೂಲಕ ಪ್ರಸಿದ್ಧಿಯನ್ನು ಹೊಂದಿದ್ದು ಬ್ರಹ್ಮಕಲಶೋತ್ಸವ ಈ ದೇಗುಲದ ಕೀರ್ತಿ ಇಮ್ಮಡಿಗೊಳಿಸಲಿದೆ ಎಂದು ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಕಟೀಲು ದೇಗುಲದ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಹಾಗೂ ಕಮಲಾದೇವೀ ಪ್ರಸಾದ ಅಸ್ರಣ್ಣ ಆಶೀರ್ವಚನ ನೀಡಿ ಮಾತನಾಡಿದರು.
ಮುಂಡ್ಕೂರು ಕ್ಷೇತ್ರದ ಪವಿತ್ರ ಪಾಣಿ ಪಿ.ರಾಮದಾಸ ಮಡ್ಮಣ್ಣಾಯ ಅಧ್ಯಕ್ಷತೆ ವಹಿಸಿದ್ದು, ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ,ಕುಡ್ತಿಮಾರು ಗುತ್ತು, ಮುಂಡ್ಕೂರು ರತ್ನಾಕರ ಶೆಟ್ಟಿ, ಸದಾನಂದ ಕುಂದರ್, ಜಗದೀಶ್ ಕಾಮತ್, ಯುಗಪುರುಷದ ಭುವನಾಭಿರಾಮ ಉಡುಪ, ಕುಡ್ತಿಮಾರು ಗುತ್ತು ಭಾಸ್ಕರ ಶೆಟ್ಟಿ, ಏಳಿಂಜೆ ಅನಿಲ್ ಶೆಟ್ಟಿ, ಡಾ. ಎನ್. ಎಸ್.ಶೆಟ್ಟಿ, ಕಡಂದಲೆ ಗುತ್ತು ಸುದರ್ಶನ ಶೆಟ್ಟಿ, ಸಮಿತಿಯ ಗೌರವಾಧ್ಯಕ್ಷ ಮುಂಡ್ಕೂರು ಅಂಗಡಿಗುತ್ತು ಪ್ರಸಾದ್ ಎಂ.ಶೆಟ್ಟಿ, ಕಡಂಬೋಡಿ ಮಹಾಬಲ ಪೂಜಾರಿ, ಸಚ್ಚರಪರಾರಿ ಸಂದೀಪ್ ಶೆಟ್ಟಿ, ಬ್ರಹ್ಮ ಕಲಶೋತ್ಸವದ ಮುಂಬಯಿ ಸಮಿತಿಯ ಅಧ್ಯಕ್ಷ ಮುಂಡ್ಕೂರು ಮುಲ್ಲಡ್ಕ ಗುರುಪ್ರಸಾದ್ ಸುಧಾಕರ ಶೆಟ್ಟಿ ಹಾಗೂ ಸ್ಥಳೀಯ ಸಮಿತಿಯ ಅಧ್ಯಕ್ಷ ಮುಂಡ್ಕೂರು ನಡಿಗುತ್ತು ವಿನಯ ಕುಮಾರ್ ಶೆಟ್ಟಿ, ದೇಗುಲದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಎಂ.ಜಿ. ಕರ್ಕೇರ, ಅಧ್ಯಕ್ಷ ಕಜೆ ಹೊಸಮನೆ ಸುಂದರ ಸಪಳಿಗ, ಉಪಾಧ್ಯಕ್ಷ ಹೆಗ್ಗಡೆ ಕಜೆ ಚೆನ್ನಪ್ಪ ಸಪಳಿಗ, ಪ್ರಧಾನ ಕಾರ್ಯದರ್ಶಿ ಕಜೆ ಪಡುಬೈಲು ಸುರೇಂದ್ರ ಸಾಲ್ಯಾನ್, ಜತೆ ಕಾರ್ಯದರ್ಶಿ ಕಜೆ ಮಂಗಿಲ್ಮಾರ್ ನಾರಾಯಣ ಸಪಳಿಗ, ಕೋಶಾಧಿಕಾರಿ ಕಜೆ ಆಚೆಮನೆ ಉದಯ ಕುಮಾರ್, ಜತೆ ಕೋಶಾಧಿಕಾರಿ ಕಜೆ ಮನೆ ಭುಜಂಗ ಮೂಲ್ಯ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ಮುಲ್ಲಡ್ಕ ಪರಾರಿ, ಪ್ರಧಾನ ಕಾರ್ಯದರ್ಶಿಗಳಾದ ಸಾಯಿನಾಥ ಶೆಟ್ಟಿ, ಸತ್ಯಶಂಕರ ಶೆಟ್ಟಿ, ಕಾರ್ಯದರ್ಶಿ ಶರತ್ ಶೆಟ್ಟಿ, ಅರುಣ್ ರಾವ್, ಉಪಾಧ್ಯಕ್ಷರಾದ ಸಂದೀಪ್ ಶೆಟ್ಟಿ ಸಚ್ಚರಪರಾರಿ, ಪ್ರಕಾಶ್ ಸಪಳಿಗ, ಶ್ರೀನಿವಾಸ ಕಾಮತ್, ಆಡಳಿತ ಸಮಿತಿಯ ಸದಸ್ಯರಾದ ಕಜೆ ಪಡುಬೈಲ್ ಜಯ ಸಾಲ್ಯಾನ್, ಕಜೆ ಆಚೆಮನೆ ಸಂಜೀವ ಶೇರಿಗಾರ್, ಕಜೆ ಹೊಸಮನೆ ಶೇಖರ ಮೆಂಡನ್, ಕಜೆ ಮಂಗಿಲ್ಮಾರ್ ದಯಾನಂದ ಸಪಳಿಗ, ಹೆಗ್ಗಡೆ ಕಜೆ ಸುಜಿತ್ ಕುಮಾರ್ ಸಪಳಿಗ, ಕಜೆಮನೆ ಸುರೇಶ್ ವಾಸು ವಿ.ಮೂಲ್ಯ ಉಪಸ್ಥಿತರಿದ್ದರು.
ಈ ಸಂದರ್ಭ ಕ್ಷೇತ್ರದ ಪುನರ್ನಿರ್ಮಾಣದಲ್ಲಿ ಸಹಕರಿಸಿದ ಮಹಾದಾನಿ ಮುಂಡ್ಕೂರು ಏಕನಾಥ ಪ್ರಭು, ಅಕ್ಷತಾ ಏಕನಾಥ ಪ್ರಭು ಅವರನ್ನು ಸಮ್ಮಾನಿಸಲಾಯಿತು. ಆಡಳಿತದಾರರಾದ ಕಜೆ ಆರು ಮನೆಯವರನ್ನು ಗೌರವಿಸಲಾಯಿತು. ಕ್ಷೇತ್ರದ ದೇವಿ ಪಾತ್ರಿ ಸತೀಶ್ ಪೂಜಾರಿ ಇವರಿಗೆ ಗೌರವಾರ್ಪಣೆ ನಡೆಯಿತು.
ಇನ್ನಾ -ಮುಂಡ್ಕೂರು- ಮುಲ್ಲಡ್ಕ ಗ್ರಾಮಸ್ಥರ ಪರವಾಗಿ ಕ್ಷೇತ್ರದ ಗೌರವಾಧ್ಯಕ್ಷ ಬ್ರಹ್ಮಕಲಶೋತ್ಸವದ ರೂವಾರಿ ಎಂ.ಜಿ. ಕರ್ಕೇರ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲ್ಯಾನ್ ಇವರನ್ನು ಸಮ್ಮಾನಿಸಲಾಯಿತು.