ಕಟಪಾಡಿ: ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ ಮನೋಹರ್ ಕಾಮತ್ (78ವರ್ಷ) ಇವರು ತಮ್ಮ ಇಳಿ ವಯಸ್ಸಿನಲ್ಲೂ ಕಳೆದ 30 ವರ್ಷಗಳಿಂದ, ಯೋಗ ಸಾಧನೆಯನ್ನು ಮಾಡುತ್ತಿದ್ದು, ಇವರ ಯೋಗ ಶ್ರದ್ಧೆ, ಜೀವನೋತ್ಸಾಹ, ಹಾಗೂ ಶ್ವಾನಪ್ರಿಯತೆಯನ್ನು ಮನಗಂಡು ಕಟಪಾಡಿ ಪತಂಜಲಿ ಯೋಗ ಕಕ್ಷೆಯ ವತಿಯಿಂದ ಸನ್ಮಾನಿಸಲಾಯಿತು.












