ಉಡುಪಿ: ನಾಲ್ಕೂವರೆ ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಮಾಲಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಸಿಬ್ಬಂದಿಗಳು!!

ಉಡುಪಿ: ಸ್ವಾರ್ಥ ಹಾಗೂ ಕಪಟ ಹೆಚ್ಚುತ್ತಿರುವ ಈ ಕಾಲದಲ್ಲಿಯೂ ಜಿಲ್ಲೆಯ ಜನರು ಪ್ರಾಮಾಣಿಕತೆ ಮೆರೆಯುತ್ತಿರುವುದು ಎಲ್ಲರೂ ಹೆಮ್ಮೆ ಪಡಬೇಕಾದ ವಿಚಾರ. ತುಳುನಾಡಿನವರು ಸತ್ಯಸಂಧರು ಹಾಗೂ ಪ್ರಾಮಾಣಿಕರು ಎನ್ನುವ ಹೆಗ್ಗಳಿಕೆ ಹೊಂದಿದ್ದು, ಇದೀಗ ಮತ್ತೊಮ್ಮೆ ಅದು ಸಾಬೀತಾಗಿದೆ.
ಖಾಸಾಗಿ ಬಸ್ಸೊಂದರ ಚಾಲಕ ಮತ್ತು ನಿರ್ವಾಹಕರು ಬರೋಬ್ಬರಿ ನಾಲ್ಕೂವರೆ ಲಕ್ಷ ಮೌಲ್ಯದ ವಜ್ರದ ಕರಿಮಣಿಯನ್ನು ಮಾಲಕರಿಗೆ ಹಿಂತಿರುಗಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಮಣಿಪಾಲದಿಂದ ಮಂಗಳೂರಿಗೆ ತೆರಳುವ ರೇಷ್ಮಾ ಹೆಸರಿನ ಖಾಸಗಿ ಬಸ್ಸು ಚಾಲಕ ಪುರಂದರ ಹಾಗೂ ನಿರ್ವಾಹಕ ಆಸಿಫ್ ಎಂಬವರು ಪ್ರಾಮಾಣಿಕತೆ ಮೆರೆದು ಇತರರರಿಗೆ ಆದರ್ಶರಾಗಿದ್ದಾರೆ. ಮಹಿಳೆಯೊಬ್ಬರು ತಮ್ಮ ಕರಿಮಣಿಯನ್ನು ಕಳೆದುಕೊಂದಿದ್ದು, ಚಾಲಕ ಮತ್ತು ನಿರ್ವಾಹಕರು ಅವರ ಕರಿಮಣಿಯನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂದು ಸಾಬೀತುಪಡಿಸಿದ್ದಾರೆ.