ಮಲ್ಪೆ: ಮಲ್ಪೆ ಸಮೀಪದ ಕೋಡಿ ಬೆಂಗ್ರೆ ಪರಿಸರದ ಸಮುದ್ರದಲ್ಲಿ ಈಜಲು ಇಳಿದು ನೀರುಪಾಲಾಗುತ್ತಿದ್ದ ಇಬ್ಬರನ್ನು ಮೀನುಗಾರಿಕಾ ದೋಣಿಯಲ್ಲಿದ್ದವರು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.
ಈ ಇಬ್ಬರು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದ್ದು, ಮೂವರು ಯುವತಿಯರ ಸಹಿತ ವಿಹಾರಕ್ಕಾಗಿ ಬಂದಿದ್ದರು. ಈ ಪೈಕಿ ಇಬ್ಬರು ಕಡಲಿನಲ್ಲಿ ಈಜಲು ನೀರಿಗಿಳಿದಿದ್ದು, ಅಲೆಯ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗುತ್ತಿದ್ದರು.
ಇದನ್ನು ಕಂಡ ಮೀನುಗಾರಿಕಾ ದೋಣಿಯಲ್ಲಿದ್ದವರು ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಿಳಿದಿದ್ದು ಇಬ್ಬರನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.