ಮಾರ್ಚ್ 6 ರಂದು ಬಿಜೆಪಿ ಕಾರ್ಯಕರ್ತರ ಅಯೋಧ್ಯಾ ಪ್ರವಾಸ ಕಾರ್ಯಕ್ರಮ: ನೋಂದಣಿ ಆರಂಭ

ಉಡುಪಿ: ಪ್ರತಿ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ವತಿಯಿಂದ 80 ಕಾರ್ಯಕರ್ತರನ್ನು ಅಯೋಧ್ಯೆ ಶ್ರೀರಾಮಚಂದ್ರನ ದರ್ಶನ ಮಾಡಿಸುವ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಕಾರ್ಯಕರ್ತರ ಅಯೋಧ್ಯಾ ದರ್ಶನ ಪ್ರವಾಸವು ಮಾರ್ಚ್ 6 ಬುಧವಾರ ಉಡುಪಿ ರೈಲು ನಿಲ್ದಾಣದಿಂದ ಆರಂಭಗೊಳ್ಳಲಿದೆ.

ಈಗಾಗಲೇ ಹೆಸರನ್ನು ನೋಂದಣಿ ಮಾಡಿರುವ ಕಾರ್ಯಕರ್ತರು ತಮ್ಮ ಮೊಬೈಲ್ ನಂಬರ್ – ಆಧಾರ್ ಕಾರ್ಡ್ ಪ್ರತಿ ಹಾಗೂ 3000ರೂಗಳನ್ನು ತಮ್ಮ ಮಂಡಲದ ಅಯೋಧ್ಯಾ ದರ್ಶನ ಪ್ರಮುಖರಿಗೆ ಕೂಡಲೇ ತಲಪಿಸಬೇಕಾಗಿ ಪ್ರಕಟಣೆ ತಿಳಿಸಿದೆ.

ಮಾರ್ಚ್ 6 ರಂದು ಬೆಳಿಗ್ಗೆ 10 ಗಂಟೆಗೆ ರೈಲು ಉಡುಪಿ ನಿಲ್ದಾಣದಿಂದ ಹೊರಡಲಿದ್ದು, 5 ದಿನಗಳ ರೈಲು ಪ್ರಯಾಣ ಹಾಗೂ ಒಂದು ಪೂರ್ತಿ ದಿನ ಅಯೋಧ್ಯೆಯಲ್ಲಿ ಕಳೆಯಲಾಗುವುದು. ಒಟ್ಟು 6 ದಿನಗಳ ಕಾರ್ಯಕ್ರಮ ಇದಾಗಿದೆ. ಉಡುಪಿಯ 400 ಕಾರ್ಯಕರ್ತರ ನೋಂದಣಿ ಸ್ಥಳದಲ್ಲೇ ಮಾಡಲು ಕಾಲಾವಕಾಶ ಅಗತ್ಯ. ಜಿಲ್ಲಾ ಬಿಜೆಪಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದೆ.

ಹಾಗಾಗಿ ಅಯೋಧ್ಯೆ ದರ್ಶನದ ಅಪೇಕ್ಷಿತರು ಮಾರ್ಚ್ 6 ರಂದು ಬೆಳಿಗ್ಗೆ ಗಂಟೆ 7-30 ರ ಒಳಗೆ ಕಡ್ಡಾಯವಾಗಿ ಉಡುಪಿ ರೈಲು ನಿಲ್ದಾಣದಲ್ಲಿ ಹಾಜರಿರಬೇಕು ಎಂದು ಪ್ರಕಟಣೆ ಹೇಳಿದೆ.

ಹೆಚ್ಚಿನ ವಿವರಗಳಿಗೆ ಮಂಡಲ ಸಂಚಾಲಕರನ್ನು ಸಂಪರ್ಕಿಸಬಹುದು

ಗೀತಾಂಜಲಿ ಸುವರ್ಣ – ಸಂಚಾಲಕರು, 9901035715

ಗುರುಪ್ರಸಾದ್ ಶೆಟ್ಟಿ – ಸಹ ಸಂಚಾಲಕರು – 9901725849,
ಶಂಕರ ಅಂಕದಕಟ್ಟೆ -9620450111 ಅಧ್ಯಕ್ಷರು, ಕುಂದಾಪುರ ಮಂಡಲ