ಕಾರ್ಕಳ: ಸಾರಸ್ವತ ವೈದಿಕ ಸೇವಾ ಪ್ರತಿಷ್ಟಾನಮ್ (ರಿ) ಸಂಸ್ಥೆಯ ಉದ್ಘಾಟನೆ

ಕಾರ್ಕಳ: ವಿಪ್ರ ಸಂಘಟನೆಯು ತನ್ನ ಮೂಲ ಧ್ಯೇಯೋದ್ದೇಶಗಳನ್ನುಅನುಸರಿಸುತ್ತಾ ತಮಗಿರುವ ಗುರುತರ ಜವಾಬ್ದಾರಿಗಳಾದ ಸಮಾಜದಲ್ಲಿನ ಸಂಸ್ಕಾರ, ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಯನ್ನು ಮಾಡುವಲ್ಲಿ ಯಶಸ್ಸನ್ನು ಸಾಧಿಸಲಿ ಎಂದು ಹಿರಿಯ ವೈದಿಕರಾದ ವೇದಮೂರ್ತಿ ಹರಿ ಭಟ್ ಸಗ್ರಿ ಹೇಳಿದರು.

ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗಿದ ಸಾರಸ್ಬತ ವೈದಿಕ ಸೇವಾ ಪ್ರತಿಷ್ಟಾನಮ್ (ರಿ) ಸಂಸ್ಥೆಯನ್ನುಉದ್ಘಾಟಿಸಿ ಅವರು ಮಾತನಾಡಿದರು.

ಗೌಡಪಾದಾಚಾರ್ಯ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿಯವರ ಆಶೀರ್ವಾದದಿಂದ ಕಾರ್ಕಳದ ಲಕ್ಷ್ಮೀಪುರದ ಪಾವನ ಕ್ಷೇತ್ರದಲ್ಲಿ ಸಾರಸ್ವತ ವೈದಿಕರ ಸಂಘಟನೆಯ ಶುಭಾರಂಭವಾಗಿದ್ದು ಈ ಸಂಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಅಭಿಪ್ರಾಯ ಪಟ್ಟರು.

ಶಾಸಕ ಸುನೀಲ್ ಕುಮಾರ್ ಮಾತನಾಡಿ, ಆದಿಶಕ್ತಿಯ ಈ ಕ್ಷೇತ್ರದಲ್ಲಿ ಆರಂಭಗೊಂಡ ವೈದಿಕರ ಸಂಘಟನೆಯು ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ನಿರ್ವಹಿಸಿ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಸಭಾಧ್ಯಕ್ಷತೆಯನ್ನು ಸುರೇಶ್ ಭಟ್ ಮುಂಬೈ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಯೋಗ ಶಿಕ್ಷಕ ಸದಾಶಿವ ನಾಯಕ್ ವಿಟ್ಲ ಹಾಗೂ ಹರಿಹರಪುರಮ್ ಪ್ರಭೋದಿನಿ ಗುರುಕುಲಮ್ ನ ಪ್ರಧಾನಾಚಾರ್ಯ ಡಾ. ಕಾರ್ತಿಕ್ ವಾಗ್ಳೆ, ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ವಾಗ್ಳೆ, ನರಸಿಂಗೆ ಶ್ರೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ ಸಾಲ್ವಣ್ ಕರ್ , ಮೊಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಎಸ್.ಆರ್.ಸತೀಶಚಂದ್ರ , ಮೊಗೇರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ ರವೀಂದ್ರನಾಥ ನಾಯಕ್ ಉಪಸ್ಥಿತರಿದ್ದರು.

ವೈದಿಕ ಸಮೂಹದ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಗಿದ್ದು ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ ಸಾರಸ್ವತ ವೈದಿಕರು ಭಾಗವಹಿಸಿದ್ದರು.

ಚಿತ್ರ ಹಾಗೂ ವರದಿ : ಪಿ.ಆರ್.ರವಿಶಂಕರ್ 8483980035