ಉಡುಪಿ: ಆರೂರು ಗ್ರಾಮ ಪಂಚಾಯತ್ ನ ಪ್ರಥಮ ಕೆ.ಡಿ.ಪಿ ಸಭೆಯನ್ನು ಪಂಚಾಯತ್ ಸಭಾಭವನದಲ್ಲಿ ಜು. 25 ರಂದು ಪಂಚಾಯತ್ ಅಧ್ಯಕ್ಷ ರಾಜೀವ ಕುಲಾಲ ಇವರ ಅಧ್ಯಕ್ಷತೆಯಲ್ಲಿ. ನಡೆಸಲಾಯಿತು.
ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ತಮ್ಮ ಇಲಾಖೆಗೆ ನಿಗಧಿಪಡಿಸಿದ ಗುರಿಗಳಿಗೆ ಅನುಗುಣವಾಗಿ ಸಾಧನೆಯ ಬಗ್ಗೆ ವಿವರಣೆ ನೀಡಿದರು.
ಪ್ರಗತಿ ವರದಿಯನ್ನು ಕಾರ್ಯದರ್ಶಿ ಗುರುರಾಜ ನೀಡಿದರು. ಸಭೆಯಲ್ಲಿ ಪಂಚಾಯತ್ ನ ಉಪಾಧ್ಯಕ್ಷರು, ಸ್ಥಾಯಿಸಮಿತಿ ಅಧ್ಯಕ್ಷರು, ಕಿ. ಪಂ ರಾಜ್ ಇಂಜಿನಿಯರ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬ್ರಹ್ಮಾವರದ ಸಹಾಯಕ ಕೃಷಿ ಇಲಾಖಾಧಿಕಾರಿ, ಬ್ರಹ್ಮಾವರ ಪಶುಸಸಂಗೋಪನಾ ಇಲಾಖಾಧಿಕಾರಿ, ಸಹಾಯಕ ತೋಟಗಾರಿಕಾ ಇಲಾಖಾಧಿಕಾರಿ ಗ್ರಾಮಕರಣಿಕರು , ಮೆಸ್ಕಾಂ ಇಲಾಖಾಧಿಕಾರಿ, ಶಾಲಾ ಮುಖ್ಯೋಪಾದ್ಯಾಯರು ಅಂಗನವಾಡಿ ಕಾರ್ಯಕತೆಯರು , ಆಶಾ ಕಾರ್ಯಕತೆಯರು ಉಪಸ್ಥಿತರಿದ್ದರು . ಪಂಚಾಯತ್ ಅಭಿವೃದ್ದಿ ಅಧಿಕಾರಿ ಗೀತಾ ಬಾಳಿಗ ಕಾರ್ಯಕ್ರಮ ನಿರೂಪಿಸಿದರು.












