ನವದೆಹಲಿ: ಆರನೇ ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಆಳವಾದ ಪ್ರಸರಣವನ್ನು ಕಂಡಿದೆ. ಅತ್ಯದ್ಭುತ ಕೆಲಸದ ಆಧಾರದ ಮೇಲೆ, ನಮ್ಮ ಸರ್ಕಾರವು ಮತ್ತೊಮ್ಮೆ ಜನಾದೇಶದೊಂದಿಗೆ ಜನರಿಂದ ಆಶೀರ್ವದಿಸಲ್ಪಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದರು.
ಹಿಂದಿನ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವೆ 2047 ರ ವೇಳೆಗೆ ವಿಕಸಿತ ಭಾರತವನ್ನಾಗಿ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
2014 ರ ಮೊದಲು ಆರ್ಥಿಕತೆಯ ದುರುಪಯೋಗದ ಬಗ್ಗೆ ಮೋದಿ ಸರ್ಕಾರವು ಸಂಸತ್ತಿನಲ್ಲಿ ಶ್ವೇತಪತ್ರವನ್ನು ಮಂಡಿಸಲಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಘೋಷಿಸಿದ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯ ಬಗ್ಗೆ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಮನೆಗಳ ಮೇಲ್ಛಾವಣಿಯಲ್ಲಿ ಸೌರಫಲಕ ಅಳವಡಿಕೆಯಿಂದ 1 ಕೋಟಿ ಕುಟುಂಬಗಳು ಪ್ರತಿ ತಿಂಗಳು 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಐತಿಹಾಸಿಕ ದಿನದಂದು ಪ್ರಧಾನ ಮಂತ್ರಿಯವರ ಸಂಕಲ್ಪವನ್ನು ಸಾಕಾರಗೊಳಿಸುತ್ತದೆ ಎಂದಿದ್ದಾರೆ.
ಮಧ್ಯಮ ವರ್ಗದವರಿಗೆ ಹೊಸ ವಸತಿ ಯೋಜನೆ ಆರಂಭ
‘ಪ್ರಧಾನ ಮಂತ್ರಿ ಆವಾಸ್ ಯೋಜನೆ- ಗ್ರಾಮೀಣ’ ಅಡಿಯಲ್ಲಿ ಇನ್ನೂ ಎರಡು ಕೋಟಿ ಮನೆಗಳನ್ನು ನಿರ್ಮಿಸಲಾಗುವುದು
‘ಆಯುಷ್ಮಾನ್ ಭಾರತ್’ ಯೋಜನೆಯನ್ನು ಎಲ್ಲಾ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವಿಸ್ತರಿಸಲಾಗುವುದು.
ಸುರಕ್ಷತಾ ಮಾನದಂಡಗಳನ್ನು ಸುಧಾರಿಸಲು 40,000 ಸಾಮಾನ್ಯ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಮಾನದಂಡಕ್ಕೆ ಪರಿವರ್ತಿಸಲಾಗುವುದು.
ಈ ವರ್ಷ ಸರಾಸರಿ ITR ಮೌಲ್ಯಮಾಪನ ದಿನಗಳನ್ನು 10 ದಿನಗಳಿಗೆ ಇಳಿಸಲಾಗಿದೆ
ಆದಾಯ ತೆರಿಗೆ ಸ್ಲ್ಯಾಬ್ಗಳು ಬದಲಾಗದೆ ಯಥಾಸ್ಥಿತಿಯಲ್ಲಿ ಉಳಿಸಲಾಗಿದೆ.
FY24 ಗಾಗಿ ವಿತ್ತೀಯ ಕೊರತೆಯನ್ನು GDP ಯ 5.8% ಹಾಗೂ FY25 ಗಾಗಿ 5.1% ನಲ್ಲಿ ಇರಲಿದೆ.
ಬಹು-ಮಾದರಿ ಸಂಪರ್ಕವನ್ನು ಸಕ್ರಿಯಗೊಳಿಸಲು ಪಿ.ಎಂ ಗತಿ ಶಕ್ತಿ ಅಡಿಯಲ್ಲಿ ಯೋಜನೆಗಳನ್ನು ಗುರುತಿಸಲಾಗಿದೆ. ಮೂರು ಪ್ರಮುಖ ರೈಲ್ವೆ ಆರ್ಥಿಕ ಕಾರಿಡಾರ್ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. ಇವು ಶಕ್ತಿ, ಖನಿಜ ಮತ್ತು ಸಿಮೆಂಟ್ ಕಾರಿಡಾರ್; ಬಂದರು ಸಂಪರ್ಕ ಕಾರಿಡಾರ್ಗಳು ಮತ್ತು ಹೆಚ್ಚಿನ ಸಂಚಾರ ಸಾಂದ್ರತೆಯ ಕಾರಿಡಾರ್ಗಳಾಗಿವೆ.
ಜನಸಂಖ್ಯಾ ಸ್ಫೋಟ ಮತ್ತು ಜನಸಂಖ್ಯಾ ಸಂಯೋಜನೆಯಲ್ಲಿನ ಬದಲಾವಣೆ ಮತ್ತು ಅದು ಉಂಟುಮಾಡುವ ಸವಾಲುಗಳನ್ನು ಅಧ್ಯಯನ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು.
9 ರಿಂದ 25 ವರ್ಷದೊಳಗಿನ ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್ ಲಸಿಕೆ ನೀಡಿಕೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸಕ್ಷಮ ಆಂಗನವಾಡಿ ಮತ್ತು ಪೋಷಣ್-2.0 ಕಾರ್ಯಕ್ರಮ ಉನ್ನತೀಕರಣ