ಉಡುಪಿ: ಕಾಪು ತಾಲೂಕು ಮೂಡಬೆಟ್ಟು ಶಂಕರಪುರ ನಿವಾಸಿ ಫ್ರಾನ್ಸಿಸ್ ರವಿ ಡಿಸೋಜಾ (55) ಎಂಬ ವ್ಯಕ್ತಿಯು ಕೆಲಸದ ನಿಮಿತ್ತ ಕುವೈತ್ ದೇಶದಲ್ಲಿ ವಾಸವಿದ್ದು, ಒಂದು ತಿಂಗಳ ರಜೆ ಮಂಜೂರಾದ ಹಿನ್ನೆಲೆ, ಊರಿಗೆ ತೆರಳುವುದಾಗಿ ತಿಳಿಸಿದ್ದು, ಜ. 9 ರಂದು ಕುವೈತ್ನಿಂದ ಮಸ್ಕತ್ಗೆ ಹೋಗುವ ವಿಮಾನದಲ್ಲಿ ಹೊರಟಿರುತ್ತಾರೆ.
ಜ. 10 ರಂದು ಪತ್ನಿಗೆ ಕರೆ ಮಾಡಿ,ಮಸ್ಕತ್ನಿಂದ ದುಬೈಗೆ ಟಿಕೆಟ್ ಮಾಡಿಸಿದ್ದ ವಿಮಾನ ತಪ್ಪಿ ಹೋಗಿದ್ದು, ಬೇರೆ ಟಿಕೇಟ್ ಮಾಡಿಸುವಂತೆ ತಿಳಿಸಿರುತ್ತಾರೆ. ಅದರಂತೆ ಪತ್ನಿಯು ಟಿಕೆಟ್ ಬುಕ್ ಮಾಡಿಸಿದ್ದು, ಫ್ರಾನ್ಸಿಸ್ ರವಿ ಡಿಸೋಜಾ ಜನವರಿ 11 ರಂದು ಮಸ್ಕತ್ ನಿಂದ ಹೊರಟಿರುವುದಾಗಿ ತಿಳಿಸಿದ್ದು, ಈವರೆಗೂ ಮನೆಗೆ ಬಾರದೇ ನಾಪತ್ತೆಯಾಗಿರುತ್ತಾರೆ.
5 ಅಡಿ 9 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತುಳು, ಕೊಂಕಣಿ, ಹಿಂದಿ, ಇಂಗ್ಲೀಷ್, ಮಳಿಯಾಳಿ, ಅರೆಬಿಕ್ ಹಾಗೂ ತಮಿಳು ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ:0820-2551033, ಕಾಪು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 0820-2572333, ಪೊಲೀಸ್ ಉಪಾಧೀಕ್ಷಕರ ಕಚೇರಿ ದೂ.ಸಂಖ್ಯೆ: 08258-231333, ಪೊಲೀಸ್ ಅಧೀಕ್ಷಕರ ಕಚೇರಿ ದೂ.ಸಂಖ್ಯೆ: 0820-2534777 ಹಾಗೂ ಜಿಲ್ಲಾ ನಿಸ್ತಂತು ಕೊಠಡಿ ದೂ.ಸಂಖ್ಯೆ: 0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.