ಉಡುಪಿ: ಬ್ರಹ್ಮಾವರದ ಕುಂಜಾಲು ನಿವಾಸಿ ದಿನೇಶ್ ದೇವಳಿ ಎಂಬವರು ಇ-ಮೇಲ್ ನೆಟ್ನಿಂದ 1799 ರೂ., ಮೌಲ್ಯದ ಬ್ಲೂಟೂಥ್ ಸ್ಪೀಕರ್ ಆರ್ಡರ್ ಮಾಡಿದ್ದು, ಪಾರ್ಸೆಲ್ ತೆರೆದು ನೋಡಿದಾಗ ಇನ್ನೊಂದು ಕಂಪೆನಿಯ ಬ್ಲುಟೂತ್ ಸ್ಪೀಕರ್ ಕಳಿಸಿಕೊಡಲಾಗಿದ್ದು, ಈ ಬಗ್ಗೆ ಕಸ್ಟಮರ್ ಕೇರ್ಗೆ ಕರೆ ಮಾಡಿದಾಗ ತಪ್ಪಾಗಿದೆ ಹಣ ವಾಪಾಸ್ಸು ಮಾಡುವುದಾಗಿ ಆನ್ಲೈನ್ ಸಂಸ್ಥೆ ಹೇಳಿ ದಿನೇಶ ದೇವಳಿ ಇವರ ಮೊಬೈಲಿಗೆ ಒಂದು ಸಂದೇಶ ಕಳುಹಿಸಿದೆ.
ಆನ್ಲೈನ್ ಕಂಪೆನಿ ಆ ಸಂದೇಶವನ್ನು ಇನ್ನೊಂದು ಮೊಬೈಲ್ ನಂಬರ್ಗೆ ಫಾರ್ವಡ್ ಮಾಡಲು ತಿಳಿಸಿದ್ದು, ಹಾಗೆ ಮಾಡಿದ ಕೂಡಲೇ ದಿನೇಶ್ ಅವರ ಎಸ್ಬಿಐ ಖಾತೆಯಿಂದ 4 ಬಾರಿ 87,998 ರೂ., ಪೇಟಿಎಂ ಆನ್ಲೈನ್ ಮೂಲಕ ವರ್ಗಾವಣೆಯಾಗಿದೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.