ಮಂಗಳೂರು: ದ.ಕ.ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ಖಾಸಗಿ ಕಂಪೆನಿಯ ಮೇಲ್ವಿಚಾರಕರೊಬ್ಬರು ಬಲಿಯಾಗಿದ್ದಾರೆ.
ನವೀನ್ ಚಂದ್ರ ಕದ್ರಿ (56), ಮೃತಪಟ್ಟವರು.
ಅವರು ಆ್ಯಂಟನಿ ವೇಸ್ಟ್ ಎಂಬ ಕಂಪೆನಿಯ ಮಂಗಳೂರು ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ತೀವ್ರ ಜ್ವರಕ್ಕೆ ತುತ್ತಾಗಿದ್ದ ನವೀನ್ ಚಂದ್ರ ವಾರದ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಡೆಂಗ್ಯೂ ಬಾಧಿಸಿರುವುದು ಪತ್ತೆಯಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೇ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.