ಉಡುಪಿ: ನ್ಯಾಶನಲ್ ಕನ್ಸ್ಯೂಮರ್ ಫೇರ್ (ಎನ್ ಸಿಎಫ್) ವತಿಯಿಂದ ಕರಾವಳಿ ಬೈಪಾಸ್ ಬಳಿಯ ರಾ.ಹೆ. 66ರ ಸನಿಹದ ಶಾರದಾ ಹೋಟೆಲ್ ಸಮೀಪದ 10 ಎಕರೆ ವಿಶಾಲವಾದ ಜಾಗದಲ್ಲಿ ಆರಂಭಗೊಂಡ ಬೃಹತ್ ವಸ್ತು ಪ್ರದರ್ಶನ, ಮನೋರಂಜನೆ, ಸಾಂಸ್ಕೃತಿಕ ಮೇಳಗಳನ್ನು ಒಳಗೊಂಡ ಉಡುಪಿ ಉತ್ಸವದಲ್ಲಿ ನೀರೊಳಗಿನ ಮೀನು ಸುರಂಗ ಪ್ರದರ್ಶನ ಜನಾಕರ್ಷಣೀಯ ಕೇಂದ್ರ ಬಿಂದುವಾಗಿದೆ.
ಇಲ್ಲಿ ಆಟವಾಡಲು ಇಟಾಲಿಯನ್ ಟೊರಾಟೊರಾ, ಡ್ರ್ಯಾಗನ್ ಕಾರ್, ತ್ರಿಡಿ ಸಿನಿಮಾ, ಜಾಯಿಂಗ್ ವ್ಹೀಲ್, ಡ್ರ್ಯಾಗನ್ ವ್ಹೀಲ್, ಬ್ರೇಕ್ ಡ್ಯಾನ್ಸ್, ಮಿನಿ ಟ್ರೈನ್, ಹಿಪ್ಟೋಸ್ಲೈಡ್, ಸಿಗ್ ಸ್ಯಾಗ್, ಎಲೆಕ್ಟ್ರಿಕಲ್ ಟ್ರೈನ್, ಜೈನಾ ಬಲೂನ್, ಕಪ್ಪೆ ಸವಾರಿ, ಟೈಟಾನಿಕ್ ಜಿಗ್ ಜಾಗ್, 150 ಮೀ. ಉದ್ದದ ಬಲೂನ್, ಡ್ರ್ಯಾಗನ್ ಬಲೂನ್ ಹಾಗೂ ರಿಂಗ್ ಗೇಮ್, ಶೂಟಿಂಗ್ ಗೇಮ್ ಇತ್ಯಾದಿಗಳಿಗೆ.
ಮಕ್ಕಳ, ಯುವಜನರ ಅಚ್ಚುಮೆಚ್ಚಿನ ಫಾಸ್ಟ್ ಫುಡ್ ಗಳು, ವೈವಿಧ್ಯಮಯ ಆಹಾರ ಸಾಮಗ್ರಿಗಳು, ದಿನನಿತ್ಯ ಎಲ್ಲ ವಯೋಮಾನದವರು ಬಳಸುವ ಎಲ್ಲ ಬಗೆಯ ವಸ್ತು ವೈವಿಧ್ಯಗಳ ನೂರಾರು ಮಳಿಗೆಗಳಿವೆ. ಆಕರ್ಷಕ ಸೆಲ್ಫಿ ಚಿತ್ರಗಳು, ಪ್ರಾಣಿಗಳ ಲೋಕ, ಆಧ್ಯಾತ್ಮಿಕ ಚಿತ್ರ ಪ್ರದರ್ಶನ, ಫಿಶ್ ಸ್ಪಾ ಮಸಾಜ್ ಸೇರಿದಂತೆ ಇನ್ನಷ್ಟು ಆಕರ್ಷಕಗಳು ಜನರನ್ನು ಕೈಬೀಸಿ ಕರೆಯುತ್ತಿವೆ. ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ ಇದೆ ಎಂದು ಸಂಸ್ಥೆಯ ಗೌತಮ್ ಅಗರ್ವಾಲ್ ತಿಳಿಸಿದರು.