ಬಂಟ್ವಾಳ: ಉತ್ತಮ ಆಶಯದ ಸಂಘ- ಸಂಘಟನೆಯು ಉತ್ತಮ ಸಮಾಜ ನಿರ್ಮಿಸುತ್ತದೆ. ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಸಂಘಟನೆಯನ್ನು ಮುನ್ನಡಿಸಿದ್ದಾಗ ಮತ್ತಷ್ಟು ಪ್ರಬಲವಾಗಿ ಬೆಳೆಯಲು ಸಾಧ್ಯ ಎಂದು ಎಂ.ಆರ್.ಪಿ.ಎಲ್. ಹಿರಿಯ ಪ್ರಬಂಧಕ ಗಣೇಶ್ ಬಿ. ಹೇಳಿದರು.
ಬಂಟ್ವಾಳ ತಾಲೂಕಿನ ಕಂದೂರು ಶ್ರೀ ಗುರು ಮಾಚಿದೇವ ಸಮುದಾಯ ಭವನದಲ್ಲಿ ಭಾನುವಾರ ನಡೆದ ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘದ 32ನೇ ವಾರ್ಷಿಕ ಮಹೋತ್ಸವದ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಸಂಘದ ಅಧ್ಯಕ್ಷ ಎನ್.ಕೆ. ಶಿವ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಹರೀಶ್ ಮಂಕುಡೆ, ಗೌರವಾಧ್ಯಕ್ಷ ಸೊಮಪ್ಪ ಮಾಸ್ಟರ್ ರಾಯಿ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ರಾಮ ಮಂಕುಡೆ, ಯುವ ಬಳಗ ಅಧ್ಯಕ್ಷ ಸಂದೇಶ್ ಕೊಯಿಲ, ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಶುಭ ಹಾರೈಸಿದರು.
ಜಿಲ್ಲಾ ಸರಕಾರಿ ಪ್ರಧಾನ ವಕೀಲ ನವೀನ್ ಕುಮಾರ್ ಎಂ.ಜಿ., ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಮತಿ ಎಸ್. ಖಂಡಿಗ, ಸಂಘದ ಸ್ಥಾಪಕ ಸದಸ್ಯ ಸಂಜೀವ ಸಾಲಿಯಾನ್ ಕುಕ್ಕಾಜೆ, ಪ್ರಗತಿಪರ ಕೃಷಿಕರಾದ ಚಂದಪ್ಪ ಮಡಿವಾಳ ಕೆದಿಲ, ಚಂದ್ರಶೇಖರ ಮಡಿವಾಳ ಕಣಂದೂರು ಇವರನ್ನು ಸನ್ಮಾನಿಸಲಾಯಿತು.
ಯೋಗೀಶ ಕಲಸಡ್ಕ ನಿರೂಪಿದರು. ಪುಷ್ಪರಾಜ ಕೆ. ಕುಕ್ಕಾಜೆ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿ ವಾರ್ಷಿಕ ವರದಿ ವಾಚಿಸಿದರು. ನಿತಿನ್ ವಿಟ್ಲ ವಂದಿಸಿದರು.