ಮಂಗಳೂರು: ಡೆಂಗ್ಯು ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಜೀವಿಗಳಿಗೆ ಆಸ್ಪದ ನೀಡುವ ಅಂಗಡಿ ಮನೆ, ನಿರ್ಮಾಣ ಹಂತದ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಮಹಾನಗರಪಾಲಿಕೆ ಅಧಿಕಾರಿಗಳು, ಶನಿವಾರ ಹಳೇ ಟಯರ್ಗಳಲ್ಲಿ ನೀರು ನಿಂತು ರೋಗಕ್ಕೆ ಆಹ್ವಾನ ನೀಡುತ್ತಿದ್ದ ವ್ಯಕ್ತಿಗೆ ರೂ. 5000 ದಂಡ ವಿಧಿಸಿದೆ.
ಕಣ್ಣೂರು ಕೆಫೆಕಾರ್ಟ್ ಸಂಸ್ಥೆಯ ಮಾಲಕ ನಿಶಾನ್ ಚಂದ್ರ ಎಂಬವರು ತನ್ನ ಆವರಣದಲ್ಲಿ ಹಳೆಯ ಟಯರ್ಗಳನ್ನು ಇಟ್ಟಿದ್ದು, ಇದರಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಮಹಾನಗರಪಾಲಿಕೆ ಅಧಿಕಾರಿಗಳು, ಸದರೀ ವ್ಯಕ್ತಿಗೆ ರೂ. 5000 ದಂಡ ಸ್ಥಳದಲ್ಲೇ ವಿಧಿಸಿ, ಎಚ್ಚರಿಕೆ ನೀಡಿದರು.